ಜ.21,22,23 ರಂದು ದುಗಲಡ್ಕ ಶೈಖುನಾ ಅಸ್ಸಯ್ಯದ್ ಫಕ್ರುದ್ದೀನ್ ತಂಙಳ್ ಅಲ್ ಬುಖಾರಿರವರ 19ನೇ ಆಂಡ್ ನೇರ್ಚೆ ಹಾಗೂ ಉರೂಸ್ ಸಮಾರಂಭ

0

ದುಗಲಡ್ಕ ಅಸ್ಸಯ್ಯಿದ್ ಫಕ್ರುದ್ದಿನ್ ತಂಙಳ್ ಅಲ್ ಬುಖಾರಿರವರ ಹೆಸರಿನಲ್ಲಿ ವರ್ಷಂಪ್ರತೀ ಆಚರಿಸಿಕ್ಕೊಂಡು ಬರುತ್ತಿರುವ ಆಂಡ್ ನೇರ್ಚೆ ಹಾಗೂ ಊರೂಸ್ ಸಮಾರಂಭ ಜ.21,22,23, ರಂದು ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಎನ್.ಪಿ.ಎಂ. ಝೈನುಲ್ ಆಬಿದೀನ್ ತಂಙಳ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸಯ್ಯಿದ್ ಕುಟುಂಬದ ನೇತಾರರು, ಉಲಮಾ ಪಂಡಿತರು, ಉಮರಾ ನೇತಾರರು ಭಾಗವಹಿಸಲಿದ್ದು, ಖ್ಯಾತ ಪ್ರಭಾಷಣಕಾರರಿಂದ ಧಾರ್ಮಿಕ ಉಪನ್ಯಾಸ ನಡೆಯಲಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.