ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದ ಕಾನೂನು ಮಾಹಿತಿ ಕಾರ್ಯಗಾರ

0

ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದ ಕಾನೂನು ಸಲಹಾ ಸಮಿತಿಯ ವತಿಯಿಂದ ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜು ಸುಳ್ಯದಲ್ಲಿ ಕಾನೂನು ಮಾಹಿತಿ ಕಾರ್ಯಗಾರವು ನಡೆಯಿತು.

ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದ ೪ನೇ ವರ್ಷದ ಕಾನೂನು ವಿದ್ಯಾರ್ಥಿ ಸಚಿನ್ ಹೆಚ್.ಆರ್ ಉಚಿತ ಕಾನೂನು ಸೇವೆ ಮತ್ತು ಜನತಾ ನ್ಯಾಯಾಲಯ ಮತ್ತು ನಾಲ್ಕನೇ ವರ್ಷದ ಕಾನೂನು ವಿದ್ಯಾರ್ಥಿ ಮಹಮ್ಮದ್ ರಾಫಿ. ಸಿ.ಎ.ರವರು ಮಹಿಳೆ ಮತ್ತು ಮೂಲಭೂತ ಹಕ್ಕುಗಳು ಎಂಬ ವಿಷಯಗಳ ಬಗ್ಗೆ ಕಾನೂನು ಮಾಹಿತಿ ನೀಡದರು. ಕಾನೂನು ಉಪನ್ಯಾಸಕಿ ರಶ್ಮಿ.ಹೆಚ್ ಪ್ರಚಲಿತ ಕಾನೂನಿನ ಬಗ್ಗೆ ಮಾಹಿತಿ ನೀಡಿದರು. ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಧಿಕಾರಿ ಸಾವಿತ್ರಿ. ಕೆ ರವರು ಅಧ್ಯಕ್ಷತೆ ವಹಿಸಿದರು, ಉಪನ್ಯಾಸಕಿ ಪ್ರೇಮಲತಾರವರು ಧನ್ಯವಾದ ಸಮರ್ಪಿಸಿದರು. ಕನ್ನಡ ಉಪನ್ಯಾಸಕಿ ಬೇಬಿವಿದ್ಯಾರವರು ನಿರೂಪಿಸಿದ ಈ ಕಾರ್ಯಾಗಾರದಲ್ಲಿ ಉಪನ್ಯಾಸಕ ವೃಂದ ಮತ್ತು ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದು ಕಾರ್ಯಗಾರದ ಸದುಪಯೋಗ ಪಡೆದುಕೊಂಡರು.