ಅಡ್ಪಂಗಾಯ ಅಯ್ಯಪ್ಪ ಮಂದಿರದಲ್ಲಿ ಮಕರ ಸಂಕ್ರಮಣದ ಪ್ರಯುಕ್ತ ವಿಶೇಷ ಪೂಜೆ – ಸನ್ಮಾನ

0

ಅಡ್ಪಂಗಾಯ ಅಯ್ಯಪ್ಪ ಮಂದಿರದಲ್ಲಿ ಮಕರ ಸಂಕ್ರಮಣದ ಪ್ರಯುಕ್ತ ವಿಶೇಷ ಪೂಜೆ ಹಾಗೂ 4ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ದುರ್ಗಾ ಪೂಜೆ, ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಹಾಗೂ ತಾಲೂಕಿನ ವಿವಿಧ ಕ್ಷೇತ್ರಗಳಲ್ಲಿನ ಹೆಮ್ಮೆಯ ಸಾಧಕರಿಗೆ ಸನ್ಮಾನ ನಡೆಯಿತು.
ಸುಳ್ಯದ ಖ್ಯಾತ ಸಾಹಿತಿ ಹಾಗೂ ಅರೆಭಾಷೆ ವಿದ್ವಾಂಸ, ತೇಜಕುಮಾರ್ ಬಡ್ಡಡ್ಕ, ಹಿರಿಯ ಪತ್ರಕರ್ತ ಗಂಗಾಧರ ಮಟ್ಟಿ ಸೇರಿದಂತೆ ಹಲವರಿಗೆ ಅಯ್ಯಪ್ಪನ ಸನ್ನಿಧಿಯಲ್ಲಿ ಸನ್ಮಾನ ನಡೆಯಿತು.ಅಡ್ಪಂಗಾಯ ಶ್ರೀ ಅಯ್ಯಪ್ಪ ಸೇವಾ ಟ್ರಸ್ಟ್ ಅಡ್ಪಂಗಾಯ, ಇದರ ವತಿಯಿಂದ ಸನ್ನಿಧಿಯ 4ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಜ.15 ರಂದು ಪ್ರಾತಃ ಕಾಲ ಗಣಪತಿ ಹವನದೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮವು ಸಂಜೆ ದೀಪಾರಾಧನೆಯೊಂದಿಗೆ ಸಾಗಿ, ಭಜನಾ ಕಾರ್ಯಕ್ರಮ, ಶ್ರೀ ಸತ್ಯನಾರಾಯಣ ದೇವರ ಪೂಜೆ ಹಾಗೂ ಶ್ರೀ ದುರ್ಗಾಪೂಜೆ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆಯೊಂದಿಗೆ ಸಂಪನ್ನವಾಯಿತು.ನಂತರ ಶ್ರೀ ಅಯ್ಯಪ್ಪ ಸ್ವಾಮೀ ಸೇವಾ ಟ್ರಸ್ಟ್ ಸನ್ನಿಧಾನ ಅಡ್ಪಂಗಾಯ ಇದರ ವತಿಯಿಂದ, ಶ್ರೀ ಕ್ಷೇತ್ರದ ಧರ್ಮದರ್ಶಿಗಳು ಹಾಗೂ ಗುರುಸ್ವಾಮಿಳಾಗಿರುವ ಶಿವಪ್ರಕಾಶ್ ಅಡ್ಪಂಗಾಯರ ನೇತೃತ್ವದಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಸ್ಮರಣೀಯವಾದ ಕೊಡುಗೆಗಳನ್ನು ನೀಡುತ್ತಿರುವ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ನಡೆಯಿತು. ಸಾಹಿತ್ಯಕ್ಷೇತ್ರದಲ್ಲಿ ತನ್ನದೇ ಶೈಲಿಯ ಬರವಣಿಗೆಗಳ ಮೂಲಕ ಹಲವಾರು ಕೃತಿ, ಕಾದಂಬರಿಗಳನ್ನು ಬರೆದಿರುವ ಖ್ಯಾತ ಅರೆಭಾಷೆ ವಿದ್ವಾಂಸ ತೇಜಕುಮಾರ್ ಬಡ್ಡಡ್ಕ, ಪತ್ರಿಕೋದ್ಯಮದಲ್ಲಿ, ಸುಳ್ಯದ ಹಿರಿಯ ಪತ್ರಕರ್ತ, ಉದಯವಾಣಿ ಪತ್ರಿಕೆಯ ಗಂಗಾಧರ ಮಟ್ಟಿ, ಸಾಂಸ್ಕೃತಿಕ ಕ್ಷೇತ್ರದಲ್ಲಿ, ‘ಮಂಜು ಬ್ರದರ್ ‘ ಎಂದೇ ಖ್ಯಾತಿಯ, ಮಂಜುನಾಥ ಬಂಗ್ಲೆಗುಡ್ಡೆ ಹಾಗೂ ದೇಶಸೇವೆಯಲ್ಲಿ, ತಾಯ್ನಾಡಿಗೆ ಸ್ಮರಣೀಯ ಸೇವೆ ಸಲ್ಲಿಸಿ ನಿವೃತ್ತರಾದ, ಕಮಲಾಕ್ಷ ಗೌಡ ಪಿಂಡಿಮನೆ ಇವರನ್ನು ಫಲ ಪುಷ್ಪ, ಸ್ಮರಣಿಕೆ ನೀಡಿ ಶಾಲು ಹೊದಿಸಿ ಕ್ಷೇತ್ರದ ಧರ್ಮದರ್ಶಿ ಶಿವಪ್ರಕಾಶ್ ಗುರುಸ್ವಾಮಿಗಳು ಸನ್ಮಾನಿಸಿದರು.


ನಂತರ ಶ್ರೀ ದೇವರ ಪ್ರಸಾದ ಹಾಗೂ ಅನ್ನಪ್ರಸಾದ ನಡೆಯಿತು.