ಹಲ್ಗುಜಿ ಶ್ರೀ ಶಿರಾಡಿ ದೈವಮತ್ತು ಅಗ್ನಿಗುಳಿಗ ಮತ್ತು ಪರಿವಾರ ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ – ನೇಮೋತ್ಸವ ಸಂಪನ್ನ

0

ನಾಲ್ಕೂರು ಗ್ರಾಮದ ಹಲ್ಗುಜಿಯಲ್ಲಿ ಶ್ರೀ ಶಿರಾಡಿ ದೈವ, ಅಗ್ನಿಗುಳಿಗ
ಮತ್ತು ಪರಿವಾರ ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ
ದೈವಗಳ ನೇಮೋತ್ಸವ ಕಾರ್ಯಕ್ರಮಗಳು ಜ. 15 ಮತ್ತು ಜ.16 ರಂದು ಜರಗಿದವು.

ಜ.15 ರಂದು ಬೆಳಿಗ್ಗೆ ಗಣಹೋಮ, ದೈವಗಳಿಗೆ ತಂಬಿಲ, ಮಧ್ಯಾಹ್ನ ಮಹಾಮಂಗಳಾರತಿ, ಪ್ರಸಾದ ವಿತರಣೆ,
ಅನ್ನಸಂತರ್ಪಣೆ ನಡೆದು,
ಸಂಜೆ ದೈವಗಳ ಭಂಡಾರ ತೆಗೆಯುವ ಕಾರ್ಯಕ್ರಮ ನಡೆಯಿತು. ಬಳಿಕ ಕಾಂತಾರ ಸಿನಿಮಾವನ್ನು ಪ್ರೋಜೆಕ್ಟರ್ ಮುಖಾಂತರ ಪ್ರದರ್ಶಿಸಲಾಯಿತು. ಜ.16 ರ ಬೆಳಗ್ಗೆ ಶ್ರೀ ಶಿರಾಡಿ ದೈವದ ನೇಮೋತ್ಸವ, ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು
ಅಪರಾಹ್ನ ಅಗ್ನಿಗುಳಿಗ ನೇಮೋತ್ಸವ ನಡೆಯಿತು. ನೂರಾರು ಸಂಖ್ಯೆಯ ಊರವರು, ಪರವೂರಿನವರು ಭಾಗವಹಿಸಿದ್ದರು.