ಪಂಜ: ಕಟೀಲು ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ

0

ಪಂಜದ ಕುದ್ವ ಶ್ರೀಮತಿ ದೇವಕಿ ಮತ್ತು ಸೀತಾರಾಮ ಗೌಡ ಕುದ್ವ ಹಾಗೂ ಮಕ್ಕಳ ಶ್ರೀ ಆದಿ’ ಮನೆಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ‘ಶ್ರೀ ದೇವಿ ಮಹಾತ್ಮೆ’ ಹರಕೆಯ ಯಕ್ಷಗಾನ ಬಯಲಾಟ
ಜ.16ರಂದು ನಡೆಯಿತು.


ಸಂಜೆ ಶ್ರೀ ದೇವಿಗೆ ಚೌಕಿ ಪೂಜೆ ನಡೆದು ಪ್ರಸಾದ ವಿತರಣೆ , ಅನ್ನಸಂತರ್ಪಣೆ ಜರುಗಿತು.


ಕುದ್ವ ಕುಟುಂಬಸ್ಥರು, ನೆಂಟರಿಷ್ಟರು,ಬಂಧುಮಿತ್ರರು, ಗಣ್ಯರು, ಕಲಾಭಿಮಾನಿಗಳು ಉಪಸ್ಥಿತರಿದ್ದರು.ಸಂಜೆ ಪೂರ್ಣಕುಂಭ, ಬ್ಯಾಂಡ್ ವಾಲಗದೊಂದಿಗೆ ಶ್ರೀ ದೇವಿಯನ್ನು ಮೆರವಣಿಗೆ ಮೂಲಕ ಕುದ್ವಕ್ಕೆ ತರಲಾಯಿತು.