ಕೆ.ವಿ.ಜಿ.ಪಾಲಿಟೆಕ್ನಿಕ್ : ಐ.ಎಸ್.ಟಿ.ಇ ವಿದ್ಯಾರ್ಥಿ ಘಟಕದಿಂದ ಪ್ರತಿಭಾ ಶೋಧ ಮತ್ತು ರಸಪ್ರಶ್ನೆ ಕಾರ್ಯಕ್ರಮ

0

ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ನ ಐ.ಎಸ್.ಟಿ.ಇ ವಿದ್ಯಾರ್ಥಿ ಘಟಕದ ವತಿಯಿಂದ ಸದಸ್ಯರಿಗೆ ಗುರುತು ಚೀಟಿ ವಿತರಣೆ, ರಸಪ್ರಶ್ನೆ ಹಾಗೂ ಪ್ರತಿಭಾ ಶೋಧ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾಲೇಜಿನ ಪ್ರಾಂಶುಪಾಲ ಜಯಪ್ರಕಾಶ ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲ ಶ್ರೀಧರ ಎಂ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಅಕಾಡೆಮಿಕ್ ಡೀನ್ ಚಂದ್ರಶೇಖರ್ ಎಂ.ಎನ್. ವಿದ್ಯಾರ್ಥಿ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಿದರು. ಐ.ಎಸ್.ಟಿ.ಇ ವಿದ್ಯಾರ್ಥಿ ಘಟಕದ ಸಂಚಾಲಕ ಫಾಲಚಂದ್ರ ವೈ.ವಿ‌. ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಆಂತರಿಕ ಗುಣಮಟ್ಟ ಖಾತರಿ ಕೋಶ(ಐ.ಕ್ಯು.ಎ.ಸಿ) ಯ ಸಂಚಾಲಕ ವಿವೇಕ್ ಪಿ. ವಂದಿಸಿದರು. ವಿದ್ಯಾರ್ಥಿ ಘಟಕದ ನಾಯಕಿ ಅಂಕಿತಾ ವೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭಾಕಾರ್ಯಕ್ರಮದ ನಂತರ ರಸಪ್ರಶ್ನೆ ಹಾಗೂ ಪ್ರತಿಭಾ ಪ್ರದರ್ಶನ ನಡೆಯಿತು.