ಸುಬ್ರಹ್ಮಣ್ಯದಲ್ಲಿ ಜೆಡಿಎಸ್ ಸಭೆ : ಮುಂದಿನ ಚುನಾವಣೆಗೆ ಅಭ್ಯರ್ಥಿ ಆಕಾಂಕ್ಷಿಗಳಾಗಿ ಅರ್ಜಿ ಸಲ್ಲಿಸಿದ ಪಟ್ಟಿಯನ್ನು ರಾಜ್ಯ ಸಮಿತಿಗೆ ರವಾನಿಸಲು ನಿರ್ಣಯ

0


ಕರ್ನಾಟಕ ರಾಜ್ಯ ದ ಕ ಜಿಲ್ಲೆ ಜನತಾ ದಳ ಜಾತ್ಯಾತೀತ ಪಕ್ಷದ ಸುಳ್ಯ ವಿಧಾನಸಭಾ ಕ್ಷೇತ್ರ ಕಡಬ ಮತ್ತು ಸುಳ್ಯ ತಾಲೂಕು ಜಂಟಿ ಆಶ್ರಯದಲ್ಲಿ ತಾರೀಕು ಜ.೧೫ರಂದು ಸುಬ್ರಹ್ಮಣ್ಯದ ವೇಲಂಕಣಿ ಸದನದಲ್ಲಿ ಪಕ್ಷದ ಕಾರ್ಯಕರ್ತರ ಸಭೆ ಜರಗಿತು.

ಸಭಾ ಆಧ್ಯಕ್ಷತೆಯನ್ನು ಕಡಬ ಜೆಡಿಎಸ್ ಅಧ್ಯಕ್ಷ ಸೈಯದ್ ವೀರಾ ಸಾಹೇಬ್ ವಹಿಸಿದ್ದರು.
ಮುಖ್ಯ ಅಥಿತಿಗಳಾಗಿ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಜಾಕೆ ಮಾಧವ ಗೌಡ , ರಾಜ್ಯ ಕಾರ್ಯದರ್ಶಿ ಇಕ್ಬಾಲ್ ಎಲಿಮಲೆ, ಜಿಲ್ಳಾ ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ಜ್ಯೋತಿ ಪ್ರೇಮಾನಂದ, ಸುಳ್ಯ ತಾಲೂಕು ಅಧ್ಯಕ್ಷ ಸುಕುಮಾರ ಕೋಡ್ತುಗುಳಿ, ಡಾ.ತಿಲಕ್ ಎ ಎ ,ರಾಕೇಶ್ ಕುಂಟಿಕಾನ, ಚಂದ್ರಶೇಖರ ಗೌಡ ಕೋಡಿಬೈಲು, ಮೋಹನ್ ಚಾಂತಾಲ, ಹರಿಪ್ರಸಾದ್ ಎನ್ಕಾಜೆ, ಎ.ಬಿ.ಮೊಯಿದ್ದೀನ್, ಹೆಚ್ ದುಗ್ಗಪ್ಪ ನಾಯ್ಕ್, ದಿನೇಶ್ ಮಾಸ್ಟರ್, ಸೋಮ ಸುಂದರ್ ಕೂಜುಗೋಡು,, ಕಿಶೋರ್ ಆರಂಪಾಡಿ, ನಾರಾಯಣ ಅಗ್ರಹಾರ, ಪುರುಷೋತ್ತಮ ಮಾರಪ್ಪೆ ಸಂತೋಷ್ ಕುಮಾರ್ ಮಾರಪ್ಪೆ, ಲಿಂಗಪ್ಪ ಸುಂಕದಕಟ್ಟೆ, ಐತ್ತೂರು ಈಶ್ವರ ಶೆಟ್ಟಿ, ಬಲ್ಯ ಸತೀಶ್ ಗೌಡ ಎಡಮಂಗಲ, ಈ ಜೆ ಜೋಸ್ ಮಂಜಲ್ಲಿ ಮಲೆ ರಾಜು, ಕುಂತೂರು ಪದವು ಚಂದ್ರ, ಶಿಖರ ಏನೆಕಲ್ಲು, ಪಕ್ಷ ಸಂಘಟನೆಯ ಸಂಕಲ್ಪ ಕೈಗೊಂಡರು.
ಮುಂದಿನ ಚುನಾವಣೆಗೆ ಸುಳ್ಯ ವಿಧಾನ ಸಭಾ ಕ್ಷೇತ್ರಕ್ಕೆ ಅಭ್ಯರ್ಥಿಗಳಾಗಿ ಅರ್ಜಿ ಸಲ್ಲಿಸಿದ ನಾಲ್ಕು ಜನರ ಪಟ್ಟಿಯನ್ನ ಜಿಲ್ಲಾ ಹಾಗೂ ರಾಜ್ಯ ಮಟ್ಟಕ್ಕೆ ಕಳುಹಿಸಲು ನಿರ್ಣಯಿಸಲಾಯಿತು. ಪಕ್ಷ ಅಧಿಕಾರಕ್ಕೆ ಬಂದು ಮುಖ್ಯಮಂತ್ರಿಯಾಗಿ ಕುಮಾರ ಸ್ವಾಮಿಯವರು ಆಗುವಂತೆ ನಿರ್ಣಯ ಕೈಗೊಳ್ಳಲಾಯಿತು.
ಇತ್ತೀಚೆಗೆ ನಿಧನರಾದ ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಸುಶೀಲ್ ನೋರೋನ್ಹ ಶ್ರದ್ದಾಂಜಲಿ ಸಲ್ಲಿಸಲಾಯಿತು.