ಮೊಗ್ರ ಶ್ರೀ ಕನ್ನಡ ದೇವತೆ ಯಾನೆ ಪುರುಷ ದೈವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವ – ಇತಿಹಾಸ ಪ್ರಸಿದ್ಧ ಬೈರಜ್ಜಿ ನೇಮ

0

ಗುತ್ತಿಗಾರು ಗ್ರಾಮದ ಮೊಗ್ರ ಇತಿಹಾಸ ಪ್ರಸಿದ್ಧ ಶ್ರೀ ಕನ್ನಡ ದೇವತೆ ಯಾನೆ ಪುರುಷ ದೈವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವ ಜ.19ರಿಂದ ಜ.21ರವರೆಗೆ ನಡೆಯಿತು.

ಜ.19 ರಂದು ಮೊಗ್ರ ದೊಡ್ಡಮನೆಯಲ್ಲಿ ಶ್ರೀ ದೇವರಿಗೆ ಸಮಾರಾಧನೆ ನಡೆಯಿತು. ರಾತ್ರಿ ಮಲ್ಕಜೆ ಮಾಳಿಗೆಯಿಂದ ಭಂಡಾರ ಬಂದು, ಜ.21ರಂದು ಬೆಳಿಗ್ಗೆ ಶ್ರೀ ಉಳ್ಳಾಕುಳ ನೇಮ, ಕುಮಾರ ನೇಮ ನಡೆಯಿತು. ಸಂಜೆ ಉಳ್ಳಾಕುಲು ಭಂಡಾರ ಹೊರಟು ಪುರುಷ ದೈವದ ನೇಮ, ರಾತ್ರಿ ರುದ್ರಚಾಮುಂಡಿ ನೇಮ , ಮಲೆಚಾಮುಂಡಿ ನೇಮ ನಡೆಯಿತು.

ಜ.21 ರಂದು ಬೆಳಿಗ್ಗೆ ಇತಿಹಾಸ ಪ್ರಸಿದ್ಧ ಬೈರಜ್ಜಿ ನೇಮ ನಡೆಯಿತು.
ಊರ ಪರವೂರ ಭಕ್ತಾದಿಗಳು ಆಗಮಿಸಿ ದೈವದ ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರ ಎಂ.ಎನ್. ವೆಂಕಟ್ರಮಣ ಮೊಗ್ರ, ಮೊಕ್ತೇಸರ ಕಾರ್ಯಪ್ಪ ಗೌಡ ಚಿಕ್ಮುಳಿ, ಕಾರ್ಯನಿರ್ವಹಣಾ ಮೊಕ್ತೇಸರರಾದ ಚೆನ್ನಕೇಶವ ಗೌಡ ಕಮಿಲ, ಉಮೇಶ್ ಗೌಡ ಮಕ್ಕಿ, ಹೆಬ್ಬಾರರಾದ ಕೇಶವ ಗೌಡ ಬಳ್ಳಕ್ಕ, ಪೂಜಾರಿವರ್ಗ, ಆಡಳಿತ ಮಂಡಳಿ ಸದಸ್ಯರು ಹಾಗೂ ಮೊಗ್ರ 24 ವಕ್ಕಲಿಗೆ ಒಳಪಟ್ಟ ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು.

ಸಚಿವ ಅಂಗಾರ ಭೇಟಿ : ಶ್ರೀ ಭೈರಜ್ಜಿ ನೇಮದ ದಿನವಾದ ಜ. 21 ರಂದು ಬೆಳಿಗ್ಗೆ ಸಚಿವ ಎಸ್ ಅಂಗಾರ ಅವರು ಭೇಟಿ ನೀಡಿ ಭೈರಜ್ಜಿ ದೈವದ ಪ್ರಸಾದ ಸ್ವೀಕರಿಸಿದರು.