ನಗರದಲ್ಲಿ ಅದ್ದೂರಿ ಮೆರವಣಿಗೆಯೊಂದಿಗೆ ಜಿಲ್ಲಾ ಯುವಜನ ಮೇಳಕ್ಕೆ ಸುಳ್ಯದಲ್ಲಿ ಚಾಲನೆ

0

ಇಂದಿನಿಂದ ಎರಡು ದಿನಗಳ ಕಾಲ ಸುಳ್ಯದ ಯುವಜನ ಸಂಯುಕ್ತ ಮಂಡಳಿ ವಠಾರದಲ್ಲಿ ನಡೆಯುವ ಯುವಜನ ಮೇಳಕ್ಕೆ ಮೆರವಣಿಗೆಯೊಂದಿಗೆ ಅದ್ದೂರಿ ಚಾಲನೆ ನೀಡಲಾಗಿದೆ.

ಸುಳ್ಯದ ಗಾಂಧಿನಗರದ ಪೆಟ್ರೋಲ್ ಬಂಕ್ ಬಳಿಯಿಂದ ಯುವಜನ ಮೆರವಣಿಗೆ ಆರಂಭಗೊಂಡಿತು.

ತಾಲೂಕಿನ ವಿವಿಧ ಯುವಕ – ಯುವತಿ ಮಂಡಲಗಳ ಸದಸ್ಯರು ಸಮವಸ್ತ್ರ ದಲ್ಲಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು

ಚೆಂಡೆ, ನಾಸಿಕ್ ಬ್ಯಾಂಡ್, ಟಾಸೆ, ಡೋಲು, ಯಕ್ಷಗಾನ, ಗೊಂಬೆ ಕುಣಿತ, ಕುದರೆ ಕುಣಿತ ಇನ್ನಿತರ ಆಕರ್ಷಣೆ ಮೆರವಣಿಗೆಯಲ್ಲಿತ್ತು.

ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ. ಮೆರವಣಿಗೆಗೆ ಚಾಲನೆ ನೀಡಿ, ಶುಭ ಹಾರೈಸಿದರು.

ಸುಳ್ಯ ತಾಲೂಕು ಪಂಚಾಯತ್ ಇ.ಒ. ಭವಾನಿಶಂಕರ್,
ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಸುಳ್ಯ‌ ನಗರ ಪಂಚಾಯತ್
ವಿನಯ ಕುಮಾರ್ ಕಂದಡ್ಕ, ಸದಸ್ಯ ರಿಯಾಜ್ ಕಟ್ಟೆಕಾರ್, ರೈತ ಉತ್ಪಾದಕ ಕಂಪೆನಿಯ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್, ಯುವಜನ ಸೇವಾ ಕ್ರೀಡಾ ಅಧಿಕಾರಿ ದೇವರಾಜ‌ ಮುತ್ಲಾಜೆ, ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ತೇಜಸ್ವಿ ಕಡಪಳ, ಗೌರವಾಧ್ಯಕ್ಷ ದಯಾನಂದ ಕೇರ್ಪಳ, ಪ್ರಧಾನ ಕಾರ್ಯದರ್ಶಿ ಸಂಜಯ್ ನೆಟ್ಟಾರು, ಕೋಶಾಧಿಕಾರಿ ಮುರಳಿ ನಳಿಯಾರು, ಉಪಾಧ್ಯಕ್ಷರುಗಳಾದ ವಿಜಯ ಕುಮಾರ್ ಉಬರಡ್ಕ, ಪ್ರವೀಣ್ ಕುಮಾರ್ ಎ.ಎಂ., ಮಾಜಿ ಅಧ್ಯಕ್ಷರುಗಳಾದ ಶಂಕರ ಪೆರಾಜೆ, ದೀಪಕ್ ಕುತ್ತಮೊಟ್ಟೆ, ಶಿವಪ್ರಕಾಶ್ ಅಡ್ಡನಪಾರೆ, ದಿಲೀಪ್ ಬಾಬ್ಲುಬೆಟ್ಟು, ಮನಮೋಹನ ಪುತ್ತಿಲ, ಯುವಜನ ಸಂಯುಕ್ತ ಮಂಡಳಿಜತೆ ಕಾರ್ಯದರ್ಶಿ ನಮಿತಾ ಹರ್ಲಡ್ಕ, ಸಾಂಸ್ಕೃತಿಕ ‌ಕಾರ್ಯದರ್ಶಿ ಆರ್. ಕೆ. ಮಹಮ್ಮದ್, ಕ್ರೀಡಾ ಕಾರ್ಯದರ್ಶಿ ರಾಜೀವಿ ಲಾವಂತಡ್ಕ, ನಿರ್ದೇಶಕರುಗಳಾದ ತುಳಸಿ ಕೇವಳ, ಸುಧಾರಾಣಿ ಮುರುಳ್ಯ, ವಿನುತಾ ಹರಿಶ್ಚಂದ್ರ ಪಾತಿಕಲ್ಲು, ಸತೀಶ್ ಮೂಕಮಲೆ, ಪವನ್ ಪಲ್ಲತಡ್ಕ, ಜನಾರ್ದನ ನಾಗತೀರ್ಥ, ದಯಾನಂದ ಪಾತಿಕಲ್ಲು, ದಿನೇಶ್ ಹಾಲೆಮಜಲು, ರಾಜೀವಿ ಗೋಳ್ಯಾಡಿ, ಗುರುರಾಜ್ ಅಜ್ಜಾವರ, ಪಿ.ವಿ.ಸುಬ್ರಮಣಿ ಕಲ್ಲುಗುಂಡಿ ಮೊದಲಾದವರಿದ್ದರು.