
ಕರಿಕ್ಕಳದಿಂದ ಟೆಲಿಪೋನ್ ಕೇಬಲ್ ನ್ನು ಬೈಕ್ ನಲ್ಲಿ ಕಳ್ಳ ಸಾಗಾಟ ಮಾಡುತ್ತಿದ್ದವರನ್ನು ಪಂಜ ಕೃಷ್ಣನಗರದಲ್ಲಿ ಸಾರ್ವಜನಿಕರು ತಡೆದು ಪೋಲೀಸ್ ವಶಕ್ಕೆ ನೀಡಿದ ಘಟನೆ ಜ.21 ರಾತ್ರಿ ಪಂಜದಿಂದ ವರದಿಯಾಗಿದೆ.
ದರ್ಶನ್ ಮತ್ತು ನಾಗರಾಜ್ ಪೋಲೀಸರು ವಶಕ್ಕೆ ಪಡೆದ ಆರೋಪಿಗಳು.

ಇವರಿಬ್ಬರು
ನೀರು ಸರಬರಾಜು ಯೋಜನೆಗೆ ರಸ್ತೆ ಬದಿಯಲ್ಲಿ ಹೊಂಡಗಳ ತೆಗೆಯುತ್ತಿರುವ ಜೇಸಿಬಿಯಲ್ಲಿ ಕೆಲಸ
ಮಾಡುತ್ತಿದ್ದರು. ಹೊಂಡ ತೆಗೆಯುವ ವೇಳೆ ಸಿಕ್ಕ ಟೆಲಿಪೋನ್ ಕೇಬಲ್ ನ್ನು
ಶೇಖರಿಸಿ ಮಾರಲು ಬೈಕ್ ನಲ್ಲಿ ತೆರಳುತ್ತಿದ್ದರು ಎನ್ನಲಾಗಿದೆ.ಸುಬ್ರಹ್ಮಣ್ಯ ಪೋಲೀಸರು ಆರೋಪಿಗಳ ಸಹಿತ ಸೊತ್ತು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
