ದುಗ್ಗಲಡ್ಕ: ಸಯ್ಯಿದ್ ಫಕ್ರುದೀನ್ ತಂಙಳ್ ರವರ 19ನೇ ಆಂಡ್ ನೇರ್ಚೆ ಹಾಗೂ ಉರೂಸ್ ಕಾರ್ಯಕ್ರಮಕ್ಕೆ ಚಾಲನೆ

0

ದುಗ್ಗಲಡ್ಕ ಅಸ್ಸಯಿದ್ ಫಕ್ರುದ್ದೀನ್ ತಂಗಳ್ ರವರ 19ನೇ ಆಂಡ್ ನೇರ್ಚೆ ಮತ್ತು ಊರೂಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸಯ್ಯಿದ್ ಎನ್ ಪಿ ಎಂ ಕೊಯಮ್ಮತಂಗಳ್ ರವರು ಧ್ವಜಾರೋಹಣ ನೆರವೇರಿಸಿ ಉರೂಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜೈನುಲ್ ಆಬಿದೀನ್ ತಂಗಳ್ ದುಗಲಡ್ಕ, ಅಸ್ಸಯಿದ್ ಫಝಲ್ ತಂಗಳ್, ಜಲಾಲುದ್ದೀನ್ ತಂಗಳ್, ಮುಖಂಡರುಗಳಾದ ಇಬ್ರಾಹಿಂ ಹಾಜಿ ಕತರ್ ಮಂಡೆಕೋಲು, ಅಬ್ದುಲ್ ರಜ್ಜಾಕ್ ಹಾಜಿ ರಾಜಧಾನಿ, ಮುಸ್ತಫ ಹಾಜಿ ಡೆಲ್ಮ, ಸ್ಥಳೀಯ ಮಸೀದಿ ಆಡಳಿತ ಸಮಿತಿ ಅಧ್ಯಕ್ಷರು ಪದಾಧಿಕಾರಿಗಳು, ಮಸೀದಿ ಖತೀಬರು, ನೂರಾರು ಮುಸ್ಲಿಂ ಬಾಂಧವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಈ ಉರೂಸ್ ಕಾರ್ಯಕ್ರಮವು ಜನವರಿ 23ರಂದು ಸಮಾರೋಪ ಸಮಾರಂಭಗೊಳ್ಳಲಿದೆ.
ಮೂರು ದಿನಗಳು ಧಾರ್ಮಿಕ ಪ್ರಭಾಷಣ, ಮೌಲೂದ್ ಪಾರಾಯಣ, ಕುತುಬಿಯತ್ ನೇರ್ಚೆ ನಡೆಯಲಿದ್ದು ಸಮಾರೋಪ ಸಮಾರಂಭದ ದಂದು ಅನ್ನದಾನ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.