ಸುಬ್ರಹ್ಮಣ್ಯ: ಅಟೋ ಚಾಲಕ ಜನಾರ್ದನ ಗೌಡ ನೇಣು ಬಿಗಿದು ಆತ್ಮಹತ್ಯೆ

0

ಸುಬ್ರಹ್ಮಣ್ಯ ಗ್ರಾಮದ ಕುಲ್ಕುoದ ನಿವಾಸಿ ಜನಾರ್ಧನ ಅವರು ತನ್ನ ಮನೆಯಲ್ಲೇ ಇಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು .

ಹಲವು ವರ್ಷಗಳ ಹಿಂದೆ ಮಯೂರ ಫ್ಯಾನ್ಸಿ ನಡೆಸುತ್ತಿದ್ದವರು ಕಳೆದ ಕೆಲ ವರ್ಷಗಳಿಂದ ಅಟೋ ರಿಕ್ಷಾ ಓಡಿಸುತಿದ್ದರು. ಆತ್ಮ ಹತ್ಯೆ ಗೆ ಕಾರಣ ತಿಳಿದು ಬಂದಿಲ್ಲ .

ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಕೃತ್ಯ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಮೃತರು ಪತ್ನಿ, ಮಕ್ಕಳು ಹಾಗೂ ಬಂಧುಗಳನ್ನು ಅಗಲಿದ್ದಾರೆ.