ಅಮರಮುಡ್ನೂರು ಪಂಚಾಯತ್ ಸದಸ್ಯ ಅಶೋಕ ಚೂಂತಾರು ರಿಗೆ ವಿಕ ಸೂಪರ್ ಸ್ಟಾರ್ ರೈತ ಪ್ರಶಸ್ತಿ

0

ಅಮರಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ಪ್ರಗತಿಪರ ಕೃಷಿಕರಾಗಿರುವ ಅಶೋಕ ಚೂಂತಾರು ರವರಿಗೆ ವಿಜಯ ಕರ್ನಾಟಕ ಪತ್ರಿಕೆ ಕೊಡಮಾಡುವ ಸೂಪರ್ ಸ್ಟಾರ್ ರೈತ ಜಿಲ್ಲಾ ಪ್ರಶಸ್ತಿ ಲಭಿಸಿದೆ.ಮಂಗಳೂರಿನ ವಾಮಂಜೂರು ಚರ್ಚ್ ಸಭಾಭವನದಲ್ಲಿ ಜ.24 ರಂದು ನಡೆದ ಸಮಾರಂಭದಲ್ಲಿ ಸಮಗ್ರ ಕೃಷಿಕ ಅಶೋಕ ಚೂಂತಾರು ರವರು ಪ್ರಶಸ್ತಿ ಸ್ವೀಕರಿಸಿದರು.

ದ.ಕ ಜಿಲ್ಲೆಯಲ್ಲಿ 8 ಮಂದಿ ಸಾಧಕ ಕೃಷಿಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ‌. ಕಳೆದ 5 ವರ್ಷಗಳಿಂದ ವಿ.ಕೆ.ಪತ್ರಿಕೆ ಸಮಗ್ರ ಕೃಷಿಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿದೆ.ಅಶೋಕ ಚೂಂತಾರು ಓರ್ವ ಜನಪ್ರತಿನಿಧಿಯಾಗಿ ಹಾಗೂ ಸುಳ್ಯ ಪಯಸ್ವಿನಿ ‌ಜೇಸಿ ಸಂಸ್ಥೆಯ ಮೂಲಕ ಉನ್ನತ ಹುದ್ದೆಯನ್ನು ನಿರ್ವಹಿಸಿ ಯಶಸ್ಸು ಕಂಡಿರುತ್ತಾರೆ.

ಇದೀಗ ತನ್ನ ತಂದೆಯವರ ಅಗಲಿಕೆಯ ನಂತರ ತಾಯಿಯ ಮಾರ್ಗದರ್ಶನದಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡು ಯುವ ಕೃಷಿ ಸಾಧಕರ ಸಾಲಿನಲ್ಲಿ ಗುರುತಿಸಲ್ಪಟ್ಟವರಾಗಿರುತ್ತಾರೆ.

LEAVE A REPLY

Please enter your comment!
Please enter your name here