ಸಮಾಜ ಕಲ್ಯಾಣ ಇಲಾಖೆ ಪ್ರಕಟಣೆ : ಆದಿವಾಸಿ ಆರೋಗ್ಯ ಸಂಯೋಜಕ ಮತ್ತು ಆದಿವಾಸಿ ಆರೋಗ್ಯ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಆಹ್ವಾನ

0
781

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಬೆಂಗಳೂರು ರವರ ನಿರ್ದೇಶನದಂತೆ Adivasi Health access ರಡಿ Tribal health Navigation Modal ಕಾರ್ಯಕ್ರಮದಡಿ ಜಿಲ್ಲಾ ಮಟ್ಟದಲ್ಲಿ ಆದಿವಾಸಿ ಆರೋಗ್ಯ ಸಂಯೋಜಕರನ್ನು ಹಾಗೂ ತಾಲೂಕು ಮಟ್ಟದಲ್ಲಿ ಆದಿವಾಸಿ ಆರೋಗ್ಯ ಕಾರ್ಯಕರ್ತೆಯರನ್ನು ತಾತ್ಕಾಲಿಕವಾಗಿ ನೇಮಕ ಮಾಡಬೇಕಾಗಿರುತ್ತದೆ. ಅದಕ್ಕಾಗಿ ಅರ್ಜಿದಾರರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪರಿಶಿಷ್ಟ ಪಂಗಡದ ಕೊಳಗ ಮತ್ತು ಮಲೆಕುಡಿಯ ಸಮುದಾಯದ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು ಮತ್ತು ಒಬ್ಬ ಜಿಲ್ಲಾ ಮಟ್ಟದ ಆದಿವಾಸಿ ಆರೋಗ್ಯ ಸಂಯೋಜಕರಿಗೆ ಪ್ರತಿ ತಿಂಗಳು ರೂ.15,000/-ಗಳ ಗೌರವಧನ ನೀಡಲಾಗುವುದು ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

p>

ಮಂಗಳೂರು ಮತ್ತು ಸುಳ್ಯ ತಾಲೂಕುಗಳಲ್ಲಿ ತಲಾ ಒಬ್ಬರಂತೆ ಆದಿವಾಸಿ ಆರೋಗ್ಯ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳು ರೂ.೧೨ ಸಾವಿರ ಗೌರವಧನ ನೀಡಲಾಗುವುದು. ಆದ್ದರಿಂದ ಆಸಕ್ತರು, ನಿಗದಿತ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರು(ಗ್ರೇಡ್-2 ಸಮಾಜ ಕಲ್ಯಾಣ ಇಲಾಖೆ, ಸುಳ್ಯ ತಾಲೂಕು ಇವರ ಕಛೇರಿಯಿಂದ ಪಡೆದು ದಿನಾಂಕ: 05.02.2023 ರ ಒಳಗಾಗಿ ಸಂಜೆ 5.30ರೊಳಗೆ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗಾಗಿ ಸಹಾಯಕ ನಿರ್ದೇಶಕರು(ಗ್ರೇಡ್-2) ಸಮಾಜ ಕಲ್ಯಾಣ ಇಲಾಖೆ, ಸುಳ್ಯ, ದೂರವಾಣಿ ಸಂಖ್ಯೆ :08257-233527 ಇವರನ್ನು ಸಂಪರ್ಕಿಸಬಹುದೆಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here