ದುಗ್ಗಲಡ್ಕ ಹೈಸ್ಕೂಲ್ ರಸ್ತೆ ಕಾಂಕ್ರೀಟೀಕರಣ ಉದ್ಘಾಟನೆ

0
186

ಸುಳ್ಯ ನಗರ ಪಂಚಾಯತ್ ವಿಶೇಷ ಅನುದಾನದಲ್ಲಿ ನಿರ್ಮಾಣಗೊಂಡ ದುಗ್ಗಲಡ್ಕ ಸರಕಾರಿ ಪ್ರೌಢಶಾಲಾ ರಸ್ತೆ ಕಾಂಕ್ರೀಟೀಕರಣದ ಉದ್ಘಾಟನೆ ಇಂದು ನಡೆಯಿತು.

p>

ಭಾರತೀಯ ಸೇನಾ ಯೋಧ ರಾಜೇಶ್ ರವರು ದೀಪ ಬೆಳಗಿಸಿದರು. ದುಗ್ಗಲಡ್ಕ ಪ್ರೌಢಶಾಲಾ ನಿವೃತ್ತ ಮುಖ್ಯಶಿಕ್ಷಕ,ನಿವೃತ್ತ ಯೋಧ ಸುಬ್ರಹ್ಮಣ್ಯ ಎ.ಯು. ರಿಬ್ಬನ್ ಕತ್ತರಿಸಿ ರಸ್ತೆ ಉದ್ಘಾಟನೆ ಮಾಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ನಗರ ಪಂಚಾಯತ್ ಸದಸ್ಯೆ ಶ್ರೀಮತಿ ಶಶಿಕಲಾ ನೀರಬಿದಿರೆ, ಪ್ರೌಢಶಾಲಾ ಮುಖ್ಯ ಶಿಕ್ಷಕ ಸುರೇಶ್ ಕುಮಾರ್, ದುಗ್ಗಲಡ್ಕ ದುಗ್ಗಲಾಯ ದೈವಸ್ಥಾನದ ಅಧ್ಯಕ್ಷ ಸುಂದರ ರಾವ್, ಅಯ್ಯಪ್ಪ ಭಜನಾ ಮಂದಿರ ಅಧ್ಯಕ್ಷ ದಯಾನಂದ ಸಾಲಿಯಾನ್, ಪ್ರಮುಖರಾದ ದಿನೇಶ್ ಡಿ.ಕೆ., ಹೇಮಂತ ಕುಮಾರ್ ಕಂದಡ್ಕ, ಧನಂಜಯ (ಮನು) ದುಗ್ಗಲಡ್ಕ, ಸ್ಥಳೀಯರಾದ ಶ್ರೀಧರ ರೈ ದುಗ್ಗಲಡ್ಕ,ಗುಡ್ಡಪ್ಪ ಗೌಡ, ಗಂಗಾಧರ ದುಗ್ಗಲಡ್ಕ, ಶಿವಕುಮಾರ್ ಈಶ್ವರಡ್ಕ,ಶ್ರೀಮತಿ ದೇವಕಿ, ಶ್ರೀಮತಿ ಲೀಲಾವತಿ, ಶ್ರೀಮತಿ ಕಮಲ,ಶ್ರೀಮತಿ ಶಾರದಾ, ಪ್ರೌಢಶಾಲಾ ಶಿಕ್ಷಕರುಗಳಾದ ಉನ್ನಿಕೃಷ್ಣನ್, ಉದಯಕುಮಾರ್, ವೆಂಕಟ್ರಮಣ ಮತ್ತು ಶಿಕ್ಷಕಿಯರು, ವಿದ್ಯಾರ್ಥಿಗಳು, ಅಂಗನವಾಡಿ ಮಕ್ಕಳು, ಊರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here