ಅಂಜಲಿ ಮಾಂಟೇಸರಿ ಪ್ಲೇ ಸ್ಕೂಲ್ ನಲ್ಲಿ ವಾರ್ಷಿಕೋತ್ಸವ

0
396

ಅಂಜಲಿ ಮಾಂಟೇಸರಿ ಪ್ಲೇ ಸ್ಕೂಲಿನಲ್ಲಿ ವಾರ್ಷಿಕೋತ್ಸವವನ್ನು .25 ರಂದು ಆಚರಿಸಲಾಯಿತು.

p>

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶುಭಕರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಳ್ಯದ ನಿವೃತ್ತ ಪ್ರಾಂಶುಪಾಲರಾದ ಪ್ರೊ.ಬಾಲಚಂದ್ರ ರವರು ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸಭೆಯಲ್ಲಿ ಸಂಸ್ಥೆಯ ಪೋಷಕರಾದ ಸೂರ್ಯ ಸೋಂತೋಡು ಹಾಗೂ ಸಂಸ್ಥೆಯ ಸಂಚಾಲಕರಾದ ಗೀತಾಂಜಲಿ ಟಿ.ಜಿ ರವರು ಉಪಸ್ಥಿತರಿದ್ದರು. ಅತಿಥಿಗಳಾದ ಪ್ರೊಫೆಸರ್ ಬಾಲಚಂದ್ರ ರವರು ಮಕ್ಕಳಿಗೆ ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳನ್ನು ಮಾಡಿ ಮಕ್ಕಳಲ್ಲಿ ಸರ್ವತಮುಖ ಗುಣಗಳನ್ನು ಬೆಳೆಸಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಮಾ.ಮಯಾಂಕ, ಸ್ವಾಗತ ಭಾಷಣವನ್ನು ಪೋಷಕರಾದ ಶ್ರೀಮತಿ ರೇಷ್ಮಾ ಹಾಗೂ ವಂದನಾರ್ಪಣೆಯನ್ನು ಸಂಸ್ಥೆಯ ವಿದ್ಯಾರ್ಥಿಯಾದ ರೀಯಾನ ಮಾಸ್ಟರ್, ನಿರೂಪಣೆಯನ್ನು ಶೃತರಾಜ್ ಹಾಗೂ ತನ್ವಿ ನಡೆಸಿಕೊಟ್ಟರು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here