ಸುಳ್ಯ ಎನ್ನೆoಪಿಯುಸಿಯಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ

0

ಸುಳ್ಯದ ನೆಹರು ಮೆಮೋರಿಯಲ್ ಪ ಪೂ ಕಾಲೇಜಿನಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಪದವಿ ವಿಭಾಗದ ರಾಜ್ಯ ಶಾಸ್ತ್ರ ವಿಭಾಗ ಮುಖ್ಯಸ್ಥೆ ಪ್ರೊ ಮಮತ ಕೆ ಅತಿಥಿಗಳಾಗಿ ಆಗಮಿಸಿ, ಉಪನ್ಯಾಸ ನೀಡುತ್ತಾ ಸರಕಾರ ಕಟ್ಟುವಲ್ಲಿ ಮತದಾರರ ಪಾತ್ರ ಪ್ರಮುಖವಾದುದು. ಭಾರತದ ಭದ್ರ ಬುನಾದಿಗೆ ಪ್ರತಿಯೊಂದು ಮತವೂ ಪ್ರಾಮುಖ್ಯವಾದುದು.ಯುವ ಜನರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದರು. ಅಲ್ಲದೆ ಚುನಾವಣಾ ಆಯೋಗವು ಜಾರಿಗೆ ತಂದ ಸುಧಾರಣೆಗಳನ್ನು ತಿಳಿಸಿದರು.

ಕಾಲೇಜಿನ ವಿ.ಕ್ಷೇಮಾಧಿಕಾರಿ ದಾಮೋದರ ಪಿ ಅಧ್ಯಕ್ಷತೆ ವಹಿಸಿದ್ದರು.ವಿ. ಕ್ಷೇಮಾಧಿಕಾರಿ ಸಾವಿತ್ರಿ ಕೆ, ಮತದಾರ ಸಾಕ್ಷರತಾ ಸಂಘದ ಸಂಯೋಜಕಿ, ಉಪನ್ಯಾಸಕಿ ರೇಷ್ಮಾ ಎಂ ಎಂ, ಉಪನ್ಯಾಸಕಿ ಗೀತಾ ಎನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕಿ ರೇಷ್ಮಾಪ್ರತಿಜ್ಞಾ ವಿಧಿ ಭೋಧಿಸಿದರು.ಉಪನ್ಯಾಸಕಿ ಗೀತಾ ಸ್ವಾಗತಿಸಿ, ನಿರೂಪಿಸಿದರು. ವಿದ್ಯಾರ್ಥಿಗಳಾದ ಅಭಿಷೇಕ್ ಪ್ರಾರ್ಥಿಸಿ, ಅನನ್ಯ ಎಂ ಹೆಚ್ ವಂದಿಸಿದರು.ಬಳಿಕ ಪದವಿ ವಿದ್ಯಾರ್ಥಿಗಳಿಂದ ಮತದಾನದ ಮಹತ್ವದ ಕುರಿತು ಪ್ರಹಸನ ನಡೆಯಿತು.