ಸುಳ್ಯದಲ್ಲಿ ಗಣರಾಜ್ಯೋತ್ಸವ ದಿನಾಚರಣೆ

0

ಆಕರ್ಷಕ ಪಥ ಸಂಚಲನ : ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಸಂಭ್ರಮ

ಸುಳ್ಯ ತಾಲೂಕು ರಾಷ್ಟ್ರೀಯ ಹಬ್ಬಗಳ ದಿನಾಚರಣೆ ಸಮಿತಿ ಇದರ ಆಶ್ರಯದಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಜ.26 ರಂದು ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.
ತಹಶೀಲ್ದಾರ್ ಅನಿತಾಲಕ್ಷ್ಮೀ ಧ್ವಜಾರೋಹಣಗೈದರು. ಬಳಿಕ ಮಾತನಾಡಿದ ಅವರು
ಸ್ವತಂತ್ರ ಭಾರತದಲ್ಲಿ ನಾವೆಲ್ಲರೂ ಒಂದೇ, ನಾವೆಲ್ಲರೂ ಭಾರತೀಯರು ಎಂಬ ಅಚಲ ವಿಶ್ವಾಸದಿಂದ ಬಾಳುತ್ತಿದ್ದು ಪ್ರಜಾಸತಾತ್ಮಕ ಗಣರಾಜ್ಯವಾಗಿ ಯಶಸ್ವಿಯಾಗಿದ್ದೇವೆ. ಇಲ್ಲಿ ಹಲವಾರು ಧರ್ಮ, ಭಾಷೆಗಳು ನಮನ್ನು ವಿಭಜಿಸಿಲ್ಲ ಬದಲಾಗಿ ಅವು ನಮ್ಮನ್ನು ಒಗ್ಗೂಡಿಸಿವೆ. ಇದು ಗಣರಾಜ್ಯ ಭಾರತದ ಸಾರಸ್ವತವಾಗಿದೆ.


ಬಡ ಹಾಗೂ ಅನಕ್ಷರಸ್ಥ ರಾಷ್ಟ್ರವಾಗಿದ್ದ ಭಾರತವು ಇಂದು ಜಾಗತೀಕ ವೇದಿಕೆಯಲ್ಲಿ ಸಾಗುತ್ತಿರುವ ಆತ್ಮವಿಶ್ವಾಸದ ರಾಷ್ಟ್ರವಾಗಿ ರೂಪಾಂತರಗೊಂಡಿದೆ. ನಮ್ಮ ದೇಶವು ಎಲ್ಲ‌ ಕ್ಷೇತ್ರದಲ್ಲಯೂ ಇಂದು ಪ್ರಗತಿ ಸಾಧಿಸಿರುವುದು ಸಂತಸದಾಯಕ ಎಂದು ಹೇಳಿದರು.

ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪೇರಾಲು, ನಗರ ಪಂಚಾಯತ್ ಸದಸ್ಯ ಎಂ.ವೆಂಕಪ್ಪ ಗೌಡ ಭಾಗವಹಿಸಿದ್ದರು.

ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ಎಸ್.ಡಿ.ಎಂ.ಸಿ. ಅಧ್ಯಕ್ಷೆ ರಾಜೇಶ್ವರಿ ಕಾಡುತೋಟ, ಕಾಲೇಜು ಪ್ರಾಂಶುಪಾಲ ಮೋಹನ್ ಗೌಡ ಬೊಮ್ಮೆಟ್ಟಿ, ಉಪಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ, ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್ ಎಂ.ಎಚ್., ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ವೇದಿಕೆಯಲ್ಲಿದ್ದರು.

ಇ.ಒ. ಭವಾನಿಶಂಕರ್ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ವೀಣಾ ಎಂ.ಟಿ. ವಂದಿಸಿದರು. ಶಿಕ್ಷಕಿ ಜಲಜಾಕ್ಷಿ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಮೈದಾನದಲ್ಲಿ ಸಾಂಸ್ಕೃತಿಕ ವೈಭವ ನಡೆಯಿತು. ಸುಳ್ಯದ ಕೆ.ಪಿ.ಎಸ್. ಗಾಂಧಿನಗರ, ರೋಟರಿ ವಿದ್ಯಾಸಂಸ್ಥೆ, ಗ್ರೀನ್ ವ್ಯೂ ವಿದ್ಯಾಸಂಸ್ಥೆ ಸುಳ್ಯ, ಸೈಂಟ್ ಜೋಸೆಫ್ ವಿದ್ಯಾಸಂಸ್ಥೆ ಸುಳ್ಯ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಲ್ಯಾಪ್ ಟಾಪ್ ಕೊಡುಗೆ : ಎಸ್.ಎಸ್.ಎಲ್.ಸಿ. ಯಲ್ಲಿ ಸತಕಾರಿ ಶಾಲೆಯಲ್ಲಿ ಕಲಿತು ತಾಲೂಕಿಗೆ ಅಗ್ರಸ್ಥಾನಿಯಾದ ಕೆಪಿಎಸ್ ಬೆಳ್ಲಾರೆಯ ಚಂದನಲಕ್ಷ್ಮೀ ಪಿ.ಎನ್., ಗುತ್ತಿಗಾರು ಪ್ರೌಢಶಾಲಾ ವಿದ್ಯಾರ್ಥಿನಿ ಅನುಷ್ಕಾ ರಾವ್ ದೇವಾ, ಬೆಳ್ಳಾರೆ ಕೆಪಿಎಸ್ ನ ಕಾವ್ಯಶ್ರೀ, ಎಲಿಮಲೆ ಪ್ರೌಢಶಾಲೆಯ ರಕ್ಷಿತಾ ಎನ್.ಕೆ. ಯವರಿಗೆ ಲ್ಯಾಪ್ ಟಾಪ್ ನೀಡಿ ಗೌರವಿಸಲಾಯಿತು.