ಬುಲೆಟ್ ಬೈಕ್ ಕಳ್ಳತನದ ಆರೋಪಿ ಪತ್ತೆ, ಪ್ರಕರಣ ಬೇಧಿಸಿದ ಕಡಬ ಪೊಲೀಸರು

0


ಸುಳ್ಯ ನಗರ ಪರಿಸರದಿಂದ ಬುಲೆಟ್ ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿ ಕಳೆದ 2 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಕಡಬ ಪೊಲೀಸರು ಬಂದಿಸಿದ್ದಾರೆ.

೨೦೨೧ ರಲ್ಲಿ ಸುಳ್ಯ ನಗರ ಪರಿಸರದಿಂದ ಬುಲೆಟ್ ಬೈಕ್ ಒಂದನ್ನು ಈತ ಕಳ್ಳತನ ಮಾಡಿದ್ದು, ಅದೇ ಸಮಯದಲ್ಲಿ ಬೆಂಗಳೂರು ನಗರದಿಂದಲೂ ಎರಡು ಬುಲೆಟ್ ಬೈಕ್ ಗಳನ್ನು ಕಳ್ಳತನ ಮಾಡಿದ್ದ ಪ್ರಕರಣ ಈತನ ಮೇಲೆ ಇತ್ತು. ಬಳಿಕ ಆರೋಪಿ ತಲೆಮರೆಸಿಕೊಂಡಿದ್ದ.

ಕಡಬ ತಾಲೂಕಿನ ಕುಂತೂರು ಗ್ರಾಮದ ಸಾಲೆತ್ತಡ್ಕ ನಿವಾಸಿ ರಾಝಿಕ್ ಬಂಧಿತ ಯುವಕನಾಗಿದ್ದು ಈತನ ವಿರುದ್ದ ಪುತ್ತೂರು ನಗರ ಠಾಣೆ,ಉಪ್ಪಿನಂಗಡಿ,ಕೊಣಾಜೆ ಹಾಗೂ ಬಂಟ್ವಾಳ ನಗರ ಠಾಣೆಯಲ್ಲಿ ಬೇರೆ ಬೇರೆ ಪ್ರಕರಣ ದಾಖಲಾಗಿತ್ತು.

ಇದೀಗ ಜನವರಿ ೨೫ ರಂದು ಈತನನ್ನು ಪತ್ತೆ ಹಚ್ಚುವಲ್ಲಿ ಕಡಬ ಪೊಲೀಸರು ಯಶಸ್ವಿಯಾಗಿದ್ದು ಬಳಿಕ ಆತನನ್ನು ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲವು ಆರೋಪಿಗೆ ೧೫ ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿದೆ ಎಂದು ತಿಳಿದು ಬಂದಿದೆ.

ಈತನನ್ನು ಬಂಧಿಸುವಲ್ಲಿ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ಬಿಎಸ್ , ಕಡಬ ಠಾಣಾ ಎಸ್.ಐ ಆಂಜನೇಯ ರೆಡ್ಡಿ ರವರ ಮಾರ್ಗದರ್ಶನದಲ್ಲಿ ಕಡಬ ಠಾಣಾ ಎ ಎಸ್ ಐ ಸುರೇಶ್ ಮತ್ತು ಇಲಾಖೆ ಜೀಪಿನ ಚಾಲಕ ನಾರಾಯಣ ಪಾಟಾಳಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ.

LEAVE A REPLY

Please enter your comment!
Please enter your name here