ಸುಳ್ಯದಲ್ಲಿ ಜಸ್ಟ್ ಬೇಕ್ ಸಂಸ್ಥೆ ಶುಭಾರಂಭ

0


ದಕ್ಷಿಣ ಭಾರತದಲ್ಲಿ ಮನೆಮಾತಾಗಿರುವ ವಿಶೇಷ ರುಚಿಯ ಕೇಕ್ ಮತ್ತು ಇತರ ಉತ್ಪನ್ನಗಳಿಂದ ತನ್ನದೇ ಆದ ಹೆಸರು ಹೊಂದಿರುವ ಸಂಸ್ಥೆ ಜಸ್ಟ್ ಬೇಕ್ ಇದರ ನೂತನ ಮಳಿಗೆ ಸುಳ್ಯ ಕೆವಿಜಿ ಕ್ಯಾಂಪಸ್ ಬಳಿ ಜ.27 ರಂದು ಶುಭಾರಂಭಗೊಂಡಿತು.


ಇದರ ಉದ್ಘಾಟನೆ ಸಮಾರಂಭದಲ್ಲಿ ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ, ಉಪಾಧ್ಯಕ್ಷ ಡಿ ಎಸ್ ಗಿರೀಶ್, ಉಬರಡ್ಕ ಗ್ರಾಮಪಂಚಾಯತ್ ಮಾಜಿ ಹರೀಶ್ ರೈ ಉಬರಡ್ಕ,ಉದ್ಯಮಿಗಳಾದ ಕಿರಣ್‌‌ ನಿರ್ಪಾಡಿ,ಮಂಗಳ ಮೋಟಾರ್ ಡ್ರೈವಿಂಗ್ ಸ್ಕೂಲ್ ನ ರಮೇಶ್ ರೈ ,ಎಂಎನ್ಸ್ ಗೋಕುಲ್ ದಾಸ್ ಮೊದಲಾದವರು ಉಪಸ್ಥಿತರಿದ್ದರು.


ಮಳಿಗೆಯಲ್ಲಿ ಎಲ್ಲಾ ತರಹದ ಕೇಕ್ ಗಳು,ಇನ್ನಿತರ ಬೇಕರಿ ಉತ್ಪನ್ನಗಳು ದೊರೆಯುತ್ತದೆ.
ನಿಮಗೆ ಇಷ್ಟವಾದ ವಿನ್ಯಾಸದಲ್ಲಿ ಗ್ರಾಹಕರಿ ಬೇಕಾಗುವ ಪ್ಲೇವರ್ ಗಳಲ್ಲಿ ಕೇಕ್ ತಯಾರಿಸಿ ಕೊಡಲಾಗುವುದು ಎಂದು ಸಂಸ್ಥೆಯ ಪಾಲುದಾರು ತಿಳಿಸಿದರು.
ಪಾಲುದಾರರಾದ ಗುರುಪ್ರಸಾದ್ ರೈ,ಋಗ್ವೇದ್ ರೈ,ಯವರಾಜ ಶೆಟ್ಟಿ ಯವರು ನೂತನ ಮಳಿಗೆಗೆ ಅಗಮಿಸಿದ ಅತಿಥಿಗಳನ್ನು ಮತ್ತು ಗ್ರಾಹಕರನ್ನು ಸ್ವಾಗತಿಸಿ ಸುಳ್ಯದ ಮಳಿಗೆಯ ಯಶಸ್ವಿಗೆ ಸಹಕಾರ ಕೋರಿದರು.