ಚಿತ್ರಕಲಾ ಗ್ರೇಡ್ ಪರೀಕ್ಷಾ ಪರೀಕ್ಷೆಯಲ್ಲಿ ರೋಟರಿ ಶಾಲೆಗೆ ಶೇ .100 ಫಲಿತಾಂಶ

0

ಪ್ರಣಮ್ಯ ಎನ್. ಆಳ್ವ ರಾಜ್ಯ ಮಟ್ಟದಲ್ಲಿ ದ್ವೀತಿಯ


ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಹಾಗೂ ಮೌಲ್ಯ ನಿರ್ಣಯ ಮಂಡಳಿ ನವೆಂಬರ್ ನಲ್ಲಿ ನಡೆಸಿದ 2022 -23 ನೇ ಶೈಕ್ಷಣಿಕ ವರ್ಷದ ಚಿತ್ರಕಲಾ ಲೋವರ್ ಗ್ರೇಡ್ ಮತ್ತು ಹೈಯರ್ ಗ್ರೇಡ್ ಪರೀಕ್ಷಾ ಫಲಿತಾಂಶ ಬಂದಿದ್ದು, ರೋಟರಿ ಪ್ರೌಢ ಶಾಲೆಯ 9ನೇ ತರಗತಿಯ ಪ್ರಣಮ್ಯ ಎನ್ ಆಳ್ವ 549/600 ಅಂಕಗಳೊಂದಿಗೆ ರಾಜ್ಯ ಮಟ್ಟದಲ್ಲಿ ದ್ವೀತಿಯ ಸ್ಥಾನ ಪಡೆದಿರುತ್ತಾರೆ.

ರೋಟರಿ ಶಾಲೆಯಿಂದ 24 ವಿಧ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 16 ವಿಧ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ , 7 ವಿದ್ಯಾರ್ಥಿಗಳು ಪ್ರಥಮ ಶೇಣಿಯಲ್ಲಿ, ಓರ್ವ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿ ಶೇ 100 ಫಲಿತಾಂಶ ಬಂದಿರುತ್ತದೆ.

ಶರಧಿ ಆರ್ ಶೇಟ್. 498, ಭವ್ಯಎಮ್. ಆರ್.486, ವಂಶಿಕಾ 476,ಭವಿಶ್ 476,ಹಿಮಾನಿ ಎ .ಎಸ್. 475, ಪೃಥ್ವಿ ಪಿ ಆರ್ 474, ಯಶ್ಮಿ ಎಮ್. 467, ಶರಣ್ಯ 463, ಪ್ರೇರಣ ಶೆಟ್ಟಿ. 452,ಶ್ರೀಶಾಲಿ ಎಮ್ ಎ. 449, ದುರ್ಗಾಶ್ರೀ ಎಮ್ ಡಿ. 441, ಆಕಾಂಕ್ಷ .ಕೆ ಎಮ್.436, ಸಿಂಚನ ಕೆ ಎಸ್.433, ಗಾನವಿ ಎಸ್. 430, ಮನ್ವಿತ ಬಿ ಪಿ. 424,ಅಭಿರಾಜ್ ಎಮ್. 418, ಮಿಥುನ್ ಕೆ .400, ಸಮೃಧ್ದ್ . ಕೆ .399, ಲಿಖಿತಾ ಎಮ್. 383,ಧನುಶ್ ಎಸ್. ಸಿರಿಯಾರ್ .384 ,ಹರ್ಷಿತ್ ಎಸ್ ವಿ. 362,ಪೃಥ್ವಿರಾಜ್ ಕೆ ಆರ್.360,ಮಹೇಂದ್ರ 354 ಅಂಕಗಳನ್ನು ಪಡೆದಿರುತ್ತಾರೆ. ಇವರಿಗೆ ಚಿತ್ರಕಲಾ ಶಿಕ್ಷಕರಾದ ಶೀಹರಿ ಪೈಂದೋಡಿ ತರಬೇತಿ ಕೊಟ್ಟಿರುತ್ತಾರೆ.