
ಜ್ಞಾನ ಮಂದಾರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಆಕಾಡೆಮಿ ಬೆಂಗಳೂರು, ಶ್ರೀ ಜ್ಞಾನ ಮಂದಾರ ಟ್ರಸ್ಟ್ ಬೆಂಗಳೂರು ಇವುಗಳ ಆಶ್ರಯದಲ್ಲಿ ಕನ್ನಡ ಕಲಾ ಪ್ರತಿಭೋತ್ಸವ – 2023 ಕಾರ್ಯಕ್ರಮದಲ್ಲಿ ಪಂಜದ ಸಾನ್ವಿ ದೊಡ್ಡ ಮನೆಗೆ ಸಾಂಸ್ಕೃತಿಕ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ ಪ್ರತಿಷ್ಠಿತ “ಅರಳು ಮಲ್ಲಿಗೆ” ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಮಂಗಳೂರು ಕೋಡಿಯಾಲ್ ಬೈಲ್ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ಮಂಗಳೂರು ಶ್ರೀ ದೇವಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಎ. ಸದಾನಂದ ಶೆಟ್ಟಿ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ, ಜ್ಞಾನ ಮಂದಾರ ಆಕಾಡೆಮಿ ಬೆಂಗಳೂರು ಇದರ ಮಹಾ ಪೋಷಕ ಡಾ. ಹರಿಕೃಷ್ಣ ಪುನರೂರು,ಮಂಗಳೂರು ವಿಶ್ವ ವಿದ್ಯಾಲಯದ ವಿಜ್ಞಾನ ಮತ್ತು ತಾಂತ್ರಿಕ ವಿಭಾಗದ ಮುಖ್ಯಸ್ಥ ಪ್ರೊ. ಮಂಜುನಾಥ ಪಟ್ಟಾಭಿ, ಶ್ರೀ ಜ್ಞಾನ ಮಂದಾರ ಟ್ರಸ್ಟ್ ಬೆಂಗಳೂರು ಇದರ ಸಂಸ್ಥಾಪಕ ಸೋಮಶೇಖರ್ ಮುಂತಾದ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಾನ್ವಿ ದೊಡ್ಡಮನೆ ಕಡಬದ ಶ್ರೀ ಮುಕಾಂಬಿಕಾ ಮಾರುತಿ ಆಟೋ ವರ್ಕ್ಸ್ ಮಾಲಕರಾದ ನಿತ್ಯಾನಂದ ಮತ್ತು ಸೀತಾಲಕ್ಷ್ಮಿ ದೊಡ್ಡಮನೆ ದಂಪತಿಯ ಪುತ್ರಿ. ಕಡಬದ ಕ್ನನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ಕಡಬ ಇಲ್ಲಿಯ ೫ ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಈಕೆ ಯೋಗವನ್ನು ಗುರುಗಳಾದ ಶರತ್ ಮರ್ಗಿಲಡ್ಕ ಹಾಗೂ ಚಿತ್ರಕಲೆಯನ್ನು ಸತೀಶ್ ಪಂಜ ಇವರಿಂದ ಅಭ್ಯಾಸ ಮಾಡುತ್ತಿದ್ದಾರೆ.