ಅಜ್ಜಾವರ : ವಿವೇಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ

0

ಸುಳ್ಯ ತಾಲೂಕು ಅಜ್ಜಾವರ ವಿವೇಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆಯನ್ನು ಜನವರಿ 26ರಂದು ಆಚರಿಸಲಾಯಿತು.

ಧ್ವಜಾರೋಹಣವನ್ನು ಹಿರಿಯರಾದ ಬೆಳ್ಯಪ್ಪ ಮೂಡೂರ್ ನೆರವೇರಿಸಿದರು. ಸಂಚಾಲಕರದ ಹಸೈನಾರ್ ಹಾಜಿ ಗೋರಡ್ಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ವಾಸ್ತವಿಕ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ರಾಹುಲ್ ಅಡ್ಪಂಗಾಯ, ಸುಳ್ಯ ಗ್ರೀನ್ ವ್ಯೂ ಶಾಲೆ ಸಂಚಾಲಕ ಹಾಜಿ ಮೋಹಿದೀನ್ ಫ್ಯಾನ್ಸಿ ಶುಭ ಹಾರೈಸಿದರು. ಸುರಕ್ಷ ಕಮಿಟಿಯ ಅಧ್ಯಕ್ಷ ಅಬ್ದುಲ್ ರಹೆಮಾನ್ ಹಾಗೂ ಅಂದುಂ ಞ ಗೋರಡ್ಕ ವೇದಿಕೆಯಲ್ಲಿ ಉಪಸ್ಥಿದ್ದರು. ಮುಖ್ಯೋಪಾಧ್ಯಾಯರು ಪೀರಸಾಬು ಪಿ ಸ್ವಾಗತಿಸಿ ಸಹ ಶಿಕ್ಷಕಿಯರಾದ ರಶ್ಮಿ ಎನ್ ಎಸ್ ವಂದಿಸಿ ಬಿಂದು ಮೇಡಂ ಕಾರ್ಯಕ್ರಮವನ್ನು ನಿರೂಪಿಸಿದರು.
ಸಮಾರಂಭ ಕಾರ್ಯಕ್ರಮದಲ್ಲಿ ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.