ಹಳೆಗೇಟು : ಮೊಗರ್ಪಣೆ ಬಳಿ ಕಾರು ಮತ್ತು ಆಟೋರಿಕ್ಷಾ ಮುಖಾಮುಖಿ ಡಿಕ್ಕಿ, ಮಹಿಳೆಗೆ ಗಾಯ

0

.

ಹಳೆಗೇಟು ಮೊಗರ್ಪಣೆ ಸೇತುವೆ ಬಳಿ ಆಲ್ಟೊ ಕಾರು ಮತ್ತು ಆಟೋರಿಕ್ಷಾ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಇದೀಗ ವರದಿಯಾಗಿದೆ.
ಸುಳ್ಯದಿಂದ ಹಳೆಗೇಟಿನತ್ತ ಬರುತ್ತಿದ್ದ ಆಟೋರಿಕ್ಷಾ ಪೈಚಾರು ಭಾಗದಿಂದ ಸುಳ್ಯಕ್ಕೆ ಬರುತ್ತಿದ್ದ ಆಲ್ಟೊ ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಘಟನೆಯಿಂದ ಆಟೋ ರಿಕ್ಷಾದ ಹಿಂಭಾಗದಲ್ಲಿ ಕುಳಿತಿದ್ದ ಮಹಿಳೆಯೋರ್ವರಿಗೆ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.
ಆಟೋ ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.
ಆಟೋರಿಕ್ಷದ ಹಿಂಬದಿಯಲ್ಲಿ ಇಬ್ಬರು ಮಹಿಳೆಯರು ಇದ್ದರು ಎನ್ನಲಾಗಿದೆ.
ಆಟೋರಿಕ್ಷಾ ಗೆ ಡಿಕ್ಕಿ ಹೊಡೆದ ಕಾರು ಸುಮಾರು 100 ಮೀಟರ್ ದೂರದಲ್ಲಿ ಹೋಗಿ ನಿಂತಿದ್ದು ಕಾರಿನ ಚಾಲಕ ಮತ್ತು ಸವಾರರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.
ಸುಳ್ಯ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.
ಆಟೋರಿಕ್ಷಾ ಶಾಂತಿನಗರ ನಿವಾಸಿ ಕಿರಣ್ ಎಂಬುವರದಾಗಿದ್ದು ಆಲ್ಟೊ ಕಾರು ಕುರುಂಜಿಗುಡ್ಡೆ ಪರಿಸರದವರಾಗಿದೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here