ಸುನಾದ ಸಂಗೀತ ಕಲಾ ಶಾಲೆ ಸುಳ್ಯ : ಸುನಾದ ಸಂಗೀತೋತ್ಸವ 2023

0

ಸುನಾದ ಸಂಗೀತ ಕಲಾ ಶಾಲೆಯ ಸುಳ್ಯ ಶಾಖೆಯ ವತಿಯಿಂದ ಸುನಾದ ಸಂಗೀತೋತ್ಸವ 2023 ಜ.29ರಂದು ಸುಳ್ಯದ ಯುವಜನ ಸಂಯುಕ್ತ ಮಂಡಳಿಯಲ್ಲಿ ನಡೆಯಿತು. ಬೆಳಗ್ಗೆೆ 10 ಗಂಟೆಯಿಂದ ದೀಪೋಜ್ವಲನ, ಗುರುವಂದನೆ ನಡೆದು ಸುನಾದ ಸಂಗೀತ ಕಲಾ ಶಾಲಾ ವಿದ್ಯಾಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ನಡೆಯಿತು.


ಸಂಜೆ ಗಂಟೆ 6 ರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಲಿದ್ದು, ಹಾಡುಗಾರಿಕೆಯಲ್ಲಿ ವಿದ್ವಾಾನ್ ಪಟ್ಟಾಾಭಿರಾಮ ಪಂಡಿತ್, ಬೆಂಗಳೂರು, ವಯಲಿನ್ ವಾದಕರಾಗಿ ವಿದ್ವಾಾನ್ ಮೈಸೂರು ವಿ. ಶ್ರೀಕಾಂತ್ ಚೆನ್ನೈ, ಮೃದಂಗ ವಾದಕರಾಗಿ ವಿದ್ವಾಾನ್ ಕಾಂಚನ ಎ. ಈಶ್ವರ ಭಟ್, ಘಟಂ ವಾದಕರಾಗಿ ವಿದ್ವಾಾನ್ ಉಡುಪಿ ಶ್ರೀಧರ್, ತ್ರಿಿವೆಂಡ್ರಂ ರವರು ಭಾಗವಹಿಸಲಿದ್ದಾಾರೆ.