ಕನಕಮಜಲು ಶ್ರೀ ಆತ್ಮಾರಾಮ ಭಜನಾ ಮಂದಿರದ ಸುವರ್ಣ ಸಂಭ್ರಮ ಭಜನಾ ಮಂಗಲೋತ್ಸವ

0

ಹಸಿರುವಾಣಿ ಸಮರ್ಪಣೆ ಸನ್ಮಾನ – ಗೌರವಾರ್ಪಣೆ

ಭಜನೆಯ ಮೂಲಕ ಸಂಘಟನಾ ಶಕ್ತಿ ಬೆಳೆದಿದೆ: ಡಾ. ವಿಜಯ ಸರಸ್ವತಿ

ಕನಕಮಜಲಿನ ಶ್ರೀ ಆತ್ಮಾರಾಮ ಭಜನಾ ಮಂದಿರದ ಸುವರ್ಣ ಸಂಭ್ರಮದ ಭಜನಾ ಮಂಗಲೋತ್ಸವವು ಫೆ.1ರಿಂದ ಫೆ.3ರವರೆಗೆ ಜರುಗಲಿದ್ದು, ಈ ಪ್ರಯುಕ್ತ ಹಸಿರುವಾಣಿ ಸಮರ್ಪಣೆ ಹಾಗೂ ಧಾರ್ಮಿಕ ಸಭಾಕಾರ್ಯಕ್ರಮವು ಜ.29ರಂದು ಶ್ರೀ ಆತ್ಮಾರಾಮ ಸಭಾಭವನದಲ್ಲಿ ನಡೆಯಿತು.

ಬೆಳಿಗ್ಗೆ ಕನಕಮಜಲಿನ ಪ್ರಮುಖ ಕೇಂದ್ರಗಳಿಂದ ಸಿಂಗಾರಿಮೇಳದೊಂದಿಗೆ ಹಸಿರುವಾಣಿ ಮೆರವಣಿಗೆಯು ಶ್ರೀ ಆತ್ಮಾರಾಮ ದೇವರ ಸನ್ನಿಧಿಗೆ ಸಾಗಿ ಬಂದು ಉಗ್ರಾಣ ತುಂಬಿಸಲಾಯಿತು.

ಬಳಿಕ ನಡೆದ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಭಜನಾ ಮಂದಿರದ ಅಧ್ಯಕ್ಷ ವಸಂತ ಮಳಿ ಅವರು ಅಧ್ಯಕ್ಷತೆ ವಹಿಸಿದ್ದರು. ಭಜನಾ ಮಹೋತ್ಸವ ಸಮಿತಿ ಗೌರವ ಸಲಹೆಗಾರರಾದ ವಸಂತ ಗಬ್ಬಲಡ್ಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, 1972ರಲ್ಲಿ ಪ್ರಾರಂಭಗೊಂಡ ಶ್ರೀ ಆತ್ಮಾರಾಮ ಭಜನಾ ಮಂದಿರದ ಇತಿಹಾಸದ ಕುರಿತು ವಿವರಿಸಿದರು.

ಪುತ್ತೂರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸ್ನಾತಕೋತ್ತರ ವಿಭಾಗದ ಸಂಯೋಜಕರಾದ ಡಾ. ವಿಜಯ ಸರಸ್ವತಿ ಅವರು ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿ, ‘ಭಾರತೀಯ ಸಂಸ್ಕೃತಿಯು ವೇದಗಳಿಂದ ಪ್ರಾರಂಭಗೊಂಡಿದ್ದು, ಜಾನಪದದವರೆಗೆ ವಿಸ್ತಾರವಾಗಿ ಬೆಳೆದ ಸಂಸ್ಕೃತಿ. ಇಲ್ಲಿ ದೇವರನ್ನು ಒಲಿಸಿಕೊಳ್ಳಲು ಭಜನೆಯೇ ಮುಖ್ಯವಾಗಿದೆ. ಹಿಂದಿನ ಕಾಲದಲ್ಲಿ ಏಕವ್ಯಕ್ತಿ ಭಜನೆಯ ಕಾಲಗತವಿತ್ತು. ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ಭಜನೆಯು ಸಂಘಟನಾ ಶಕ್ತಿಯಾಗಿ ಬೆಳೆದಿದೆ ಎಂದರೆ ಅದುವೇ ಭಜನೆಗೆ ಇರುವ ಶಕ್ತಿಯಾಗಿದೆ’ ಎಂದು ಹೇಳಿದರು.


ಈ ಸಂದರ್ಭದಲ್ಲಿ
ಸಾಮಾಜಿಕ ಕಾರ್ಯಕರ್ತರಾದ ಚಂದ್ರಶೇಖರ ತಳೂರು ಅವರು ಭಜನಾ ಮಂದಿರದ ಪ್ರಾರಂಭದ ದಿನಗಳಲ್ಲಿ ಅಭಿವೃದ್ಧಿಗಾಗಿ ದುಡಿದ ಮಹನೀಯರ ಮನೆಯವರನ್ನು ಭಜನಾ ಮಂದಿರದ ಪರವಾಗಿ ಗುರುತಿಸಿ, ಸನ್ಮಾನಿಸಿ, ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಭಜನಾ ಮಂದಿರದ ಅರ್ಚಕರುಗಳಾಗಿ ಸೇವೆ ಸಲ್ಲಿಸುತ್ತಿರುವ ಗೋಪಾಲಕೃಷ್ಣ ಭಟ್ ವಾರಂಬಳಿತ್ತಾಯ ಮತ್ತು ಮನೋಜ್ ಕಲ್ಲೂರಾಯ, ಭಜನಾ ಮಂದಿರದ ಪರಿಚಾರಕರಾಗಿ ಸೇವೆ ಸಲ್ಲಿಸಿದ ಕೃಷ್ಣ ಗುರುಸ್ವಾಮಿ ಕಾರಿಂಜ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಭಜನಾ ಸೇವೆಗೆ ಕೊಡುಗೆ ನೀಡಿದ ಕುಂಬಕೋಡು ಪುಂಡರೀಕ ನಾಯಕ್, ಬೆಳ್ಳಿಪ್ಪಾಡಿ ಕೋಟಿಗದ್ದೆ ಜನಾರ್ದನ ನಾಯಕ್ , ಹಾಗೂ ಕೃಷ್ಣಭಟ್ ಅವರನ್ನು ಗುರುತಿಸಿ, ಗೌರವಿಸಲಾಯಿತು.
ಶ್ರೀ ಆತ್ಮಾರಾಮ ಭಜನಾ ಮಂದಿರದ ಅಧ್ಯಕ್ಷರುಗಳಾಗಿ ಸೇವೆ ಸಲ್ಲಿಸಿದ ಮಹನೀಯರುಗಳನ್ನು, ಭಜನಾ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದ ಹಿರಿಯರನ್ನು, ಪ್ರಸ್ತುತ ಆಡಳಿತ ಸಮಿತಿಯ ಎಲ್ಲಾ ಪದಾಧಿಕಾರಿಗಳನ್ನು , ಭಜನಾ ಮಂದಿರಕ್ಕಾಗಿ ವಿಶೇಷ ಸೇವೆ ಸಲ್ಲಿಸಿದ ವಸಂತ ಗಬ್ಬಲಡ್ಕ ಹಾಗೂ ಕುಸುಮಾಧರ ಬೊಮ್ಮೆಟ್ಟಿ ಅವರನ್ನು ಇದೇ ಸಂದರ್ಭದಲ್ಲಿ ಗುರುತಿಸಿ, ಸನ್ಮಾನಿಸಿ, ಗೌರವಿಸಲಾಯಿತು.

ಸುಳ್ಯ ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಯತೀಶ್ ರೈ ದುಗ್ಗಲಡ್ಕ ಅವರು ಮಾತನಾಡಿ ಭಜನೆಯ ಮೂಲಕ ‘ ಧರ್ಮ ಹಾಗೂ ಸಂಸ್ಕೃತಿಯ ಕುರಿತು ಮಕ್ಕಳಿಗೆ ಮನೆಯಿಂದಲೇ ಹೇಳಿಕೊಡುವ ಕೆಲಸ ನಡೆಯಬೇಕು ಎಂದು ಶುಭಹಾರೈಸಿದರು.
ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ ತಳೂರು ಅವರು ಮಾತನಾಡಿ ‘ ರಾಮನ ಹೆಸರಿನಲ್ಲಿ ಪ್ರಾರಂಭಗೊಂಡ ಭಜನಾ ಮಂದಿರವು ಹಿಂದೂ ಸಮಾಜಕ್ಕೆ ಸದಾ ಮಾರ್ಗದರ್ಶನ ಕೇಂದ್ರವಾಗಿ, ಪ್ರೇರಕಶಕ್ತಿಯಾಗಿ ಶತಮಾನೋತ್ಸವ ಸಂಭ್ರಮವನ್ನು ಆಚರಿಸುವಂತಾಗಲಿ ಎಂದು ಶುಭಹಾರೈಸಿದರು.

ವೇದಿಕೆಯಲ್ಲಿ ಶ್ರೀ ಆತ್ಮಾರಾಮ ಭಜನಾ ಮಂದಿರದ ಗೌರವಾಧ್ಯಕ್ಷ ಹರೀಶ್ ಮೂರ್ಜೆ, ಭಜನಾ ಮಹೋತ್ಸವ ಸಮಿತಿ ಅಧ್ಯಕ್ಷ ಜಗನ್ನಾಥ ಕಾಪಿಲ, ಭಜನಾ ಮಹೋತ್ಸವ ಸಮಿತಿ ಗೌರವ ಸಲಹೆಗಾರರುಗಳಾದ ವಸಂತ ಗಬ್ಬಲಡ್ಕ, ಆನಂದ ಮಾಸ್ತರ್ ಅಕ್ಕಿಮಲೆ, ಭಜನಾ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಕುಸುಮಾಧರ ಬೊಮ್ಮೆಟ್ಟಿ, ಭಜನಾ ಮಂದಿರದ ಕಾರ್ಯದರ್ಶಿ ಈಶ್ವರ ಕೊರಂಬಡ್ಕ ಕೋಶಾಧಿಕಾರಿ ದಾಮೋದರ ಗೌಡ ಕೋಡ್ತಿಲು, ಉಪಸ್ಥಿತರಿದ್ದರು.
ಭಜನಾ ಮಂದಿರದ ಕಾರ್ಯದರ್ಶಿ ಈಶ್ವರ ಕೊರಂಬಡ್ಕ ಸ್ವಾಗತಿಸಿ, ಭಜನಾ ಮಹೋತ್ಸವ ಸಮಿತಿ ಕೋಶಾಧಿಕಾರಿ ದಾಮೋದರ ಗೌಡ ಕೋಡ್ತಿಲು ವಂದಿಸಿದರು. ಭಜನಾ ಮಹೋತ್ಸವ ಸಮಿತಿಯ ಪ್ರಧಾನ ಸಂಯೋಜಕ ದಾಮೋದರ ಕಣಜಾಲು ಅವರು ಕಾರ್ಯಕ್ರಮ ನಿರೂಪಿಸಿದರು.

ಮೂರು ದಿನಗಳ ಕಾಲ ನಡೆಯಲಿರುವ ಅಖಂಡ ಏಕಾಹ ಭಜನಾ ಮಂಗಲೋತ್ಸವ
ಶ್ರೀ ಆತ್ಮಾರಾಮ ಭಜನಾ ಮಂದಿರವು ಯಶಸ್ವಿ 50 ಸಂವತ್ಸರಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಸುವರ್ಣ ಸಂಭ್ರಮದ ಅಖಂಡ ಏಕಾಹ ಭಜನಾ ಮಂಗಲೋತ್ಸವವು ಫೆ.1ರಂದು ಸೂರ್ಯೋದಯದಿಂದ ಫೆ.4ರಂದು ಸೂರ್ಯೋದಯದವರೆಗೆ ನಿರಂತರ 72 ಗಂಟೆಗಳ ಮೂಲಕ ನಡೆಯಲಿದೆ.
👆 Box ಪತ್ರಿಕೆಗೆ ಹಾಕುವಾಗ