ಫೆ.2,3,4 ರಂದು ಪೈಂಬೆಚ್ಚಾಲು ಗ್ರಾಂಡ್ ಅಜ್ಮೀರ್ ರ್ನೇರ್ಚೆ 8ನೇ ವಾರ್ಷಿಕೋತ್ಸವ ಮತ್ತು ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮ

0

ನೂತನ ಮದರಸ ಕಟ್ಟಡ ಉದ್ಘಾಟನೆ

ಹಯಾತುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದರಸ ಪೈಂಬೆಚ್ಚಾಲು ಇದರ ವತಿಯಿಂದ ಗ್ರಾಂಡ್ ಅಜ್ಮೀರ್ ನೇರ್ಚೆ 8ನೇ ವಾರ್ಷಿಕೋತ್ಸವ ಮತ್ತು ತ್ರಿದಿನ ಮಹ್ಫಿಲೇ ನಸೀಹ
ಹಾಗೂ ನೂತನ ಮದ್ರಸ ಕಟ್ಟಡ ಉದ್ಘಾಟನೆ ಕಾರ್ಯಕ್ರಮ 2023 ಫೆಬ್ರವರಿ 2,3,4 ದಿನಾಂಕಗಳಲ್ಲಿ ಪೈಂಬೆಚ್ಚಾಲು
ತಾಜುಲ್ ಉಲಮಾನಗರದಲ್ಲಿ ನಡೆಯಲಿದೆ ಎಂದು ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೆ.2. ರಂದು ಬೆಳಿಗ್ಗೆ 8.30 ಕ್ಕೆ ಧ್ವಜಾರೋಹಣ ನಡೆಯಲಿದ್ದು ಸ್ಥಳೀಯ ಮಸ್ಜಿದ್ ಸಮಿತಿ ಗೌರವಾಧ್ಯಕ್ಷ ಪಿ ಎಂ ಮೂಸಾ ಹಾಜಿ ಧ್ವಜಾರೋಹಣ ನೆರವೇರಿಸಲಿದ್ದಾರೆ.
ರಾತ್ರಿಇಶಾ ನಮಾಜ್ ಬಳಿಕ ಸ್ಥಳೀಯ ಮಸೀದಿ ಕಮಿಟಿ ಅಧ್ಯಕ್ಷ ಅಬ್ದುಲ್ ಖಾದರ್ ಟಿ ಎಂ ರವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಪ್ರಕೀರ್ತನ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಖ್ಯಾತಿ ಹೊಂದಿರುವ ನೂರುಸ್ಸಾದಾತ್ ಬಾಯಾರ್ ತಂಗಳ್ ರವರ ನೇತೃತ್ವದಲ್ಲಿ ದುಆ ಮಜ್ಲೀಸ್ ನಡೆಯಲಿದ್ದು
ಮದ್ಹ್ ಆಲಾಪಣೆಯನ್ನು ಡಾ!ಕೋಯ ಕಾಪಾಡ್ ಉಸ್ತಾದ್ ಮತ್ತು ತಂಡದವರಿಂದ ನಡೆಯಲಿದೆ.

ಫೆ.3 ರಂದು ಮಧ್ಯಾಹ್ನ ಜುಮಾ ನಮಾಝ್ ಬಳಿಕ :ಮೌಲೀದ್ ಪಾರಾಯಣ, ಖತಮುಲ್ ಖುರ್ ಆನ್,ದುಆ ಮಜ್ಲೀಸ್ ನಡೆಯಲಿದ್ದು ಇದರ ನೇತೃತ್ವವನ್ನು ಉಡುಪಿ, ಚಿಕ್ಕಮಂಗಳೂರು ಜಿಲ್ಲಾ ಸಂಯುಕ್ತ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ವಹಿಸಲಿದ್ದಾರೆ.
ರಾತ್ರಿ ಇಶಾಹ್ ನಮಾಝ್ ಬಳಿಕ ಪ್ರಭಾಷಣ ಹಾಗೂ ದುವಾ ಕಾರ್ಯಕ್ರಮವನ್ನು ಹಿರಿಯ ಪಂಡಿತರಾದ ಶೈಖುನಾ ಅಲ್ ಹಾಜಿ ಮಹ್ ಮೂದುಲ್ ಫೈಝಿ (ಓಲೆ ಮುಂಡೋವು ) ನೆರವೇರಿಸಲಿದ್ದು
ಮುಖ್ಯ ಪ್ರಭಾಷಣಕಾರರಾಗಿ ಸಯ್ಯದ್ ಸಿಹಾಬುದ್ದೀನ್ ಅಲ್ ಅಹ್ದದ್ ಮುತ್ತನ್ನೂರು ತಂಙಳ್ ಭಾಗವಹಿಸಲಿದ್ದಾರೆ.

ಫೆ.4 ರಂದು ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ಮಹಾಸಂಗಮ ಮತ್ತು ನೂತನ ಮದರಸ ಕಟ್ಟಡ ಉದ್ಘಾಟನೆ ನಡೆಯಲಿದ್ದು ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ಮದ್ರಸ ಕಟ್ಟಡ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿ ಖುರ್ರಸ್ಸಾದಾತ್ ಫಝಲ್ ಕೋಯಮ್ಮತಂಗಳ್ ಕೂರತ್ ವಹಿಸಲಿದ್ದು
ರಾತ್ರಿ ಇಶಾ ನಮಾಜ್ ಬಳಿಕ
ಮುಖ್ಯ ಪ್ರಭಾಷಣಕಾರರಾಗಿ ಖ್ಯಾತ ವಾಗ್ಮಿ ಶಾಫಿ ಲತ್ವೀಫಿ ನುಚಿಯಾಡ್ ಕಣ್ಣೂರು ಭಾಗವಹಿಸಲಿದ್ದಾರೆ.
ದುಆ ಆಶೀರ್ವಚನವನ್ನು ಬಹು. ಸಯ್ಯಿದ್ ಮುಹ್ಸಿನ್ ಕುಂಜಿಳ ತಂಙಳ್ ನೆರವೇರಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಇನ್ನಿತರ ಸಯ್ಯದ್ ಕುಟುಂಬದವರು,ಉಲಮಾ ಉಮರಾ ನೇತಾರರು ಭಾಗವಹಿಸಲಿದ್ದು ಕೊನೆಯಲ್ಲಿ ಅನ್ನದಾನ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೆ ಸಹಕರಿಸುವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.