ಸುಬ್ರಹ್ಮಣ್ಯದಲ್ಲಿ ಹಿಂದೂ ಹೃದಯ ಸಂಗಮ 2023

0

ನಿಮ್ಮ ಆಯ್ಕೆ ಹಿಂದೂ ಹುಡುಗರೊಂದಿಗೆ ನಿಲ್ಲುವ ಶಾಸಕರಾಗಿರಲಿ: ಶ್ರೀ ಶ್ರೀ ರಾಜಶೇಖರನಂದ ಸ್ವಾಮೀಜಿ


ಹಿಂದೂ ಸಂಘಟನೆಯಲ್ಲಿ ನಿಮ್ಮ ಮಕ್ಕಳಿದ್ದರೆ ನೀವು ವೃದ್ದಾಶ್ರಮ ಸೇರಲು ಸಾಧ್ಯವಿಲ್ಲ: ಶ್ರೀ ಶ್ರೀ ಅಭಿನವ ಮಂಜುನಾಥ ಮಹಾಸ್ವಾಮಿ

ಅನ್ಯ ಮತೀಯರು ಇಲ್ಲಿ ಬಂದು ತಮ್ಮ ಬುದ್ಧಿ ತೋರಿದರೆ ಸುಮ್ಮನಿರುವುದಿಲ್ಲ: ಶ್ರೀಕಾಂತ್ ಶೆಟ್ಟಿ ಕಾರ್ಕಳ

ಹಿಂದೂ ಹೃದಯ ಸಂಗಮ ಸಮಿತಿ ಸುಬ್ರಹ್ಮಣ್ಯ ಇದರ ವತಿಯಿಂದ ಬೃಹತ್ ಹಿಂದೂ ಹೃದಯ ಸಂಗಮ 2023 ಸಮಾರಂಭ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ರಥಬೀದಿಯಲ್ಲಿ ನಡೆಯಿತು.

ಆರಂಭದಲ್ಲಿ ಕುಮಾರಧಾರ ದಿಂದ ಬೃಹತ್ ಶೋಭಾಯತ್ರೆ ನಡೆಯಿತು. ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಹ ಸಂಚಾಲಕ ನರಸಿಂಹ ಮಾಣಿ ಭಾರತಮಾತೆಯ ಪೋಟೋ ಗೆ ಪುಷ್ಪಾರ್ಚನೆ ಚಾಲನೆ ನೀಡಿದರು. ಹಲವಾರು ಭಜನಾ ತಂಡಗಳು ಕುಣಿತ ಭಜನೆ ಯೊಂದಿಗೆ ಕುಮಾರಧಾರ ಮಹದ್ವಾರದಿಂದ ಸುಬ್ರಹ್ಮಣದ ರಥ ಬೀದಿವರೆಗೆ ವೈಭವದ ಶೋಭ ಯಾತ್ರೆ ನಡೆಯಿತು. ಬಳಿಕ ರಥ ಬೀದಿಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

ಹುಕ್ಕೇರಿ ಇಂಚಗೇರಿ ಸಂಸ್ಥಾನ ಮಠದ ಶ್ರೀ ಶ್ರೀ ಅಭಿನವ ಮಂಜುನಾಥ ಮಹಾಸ್ವಾಮಿಗಳು ಆಶೀರ್ವಚನ ನೀಡಿ , ಸನಾತನ ಹಿಂದೂ ಧರ್ಮ ಇಲ್ಲದಿದ್ದರೆ ನಮ್ಮ ದೇಶದಲ್ಲಿ ಯಾವುದೇ ಧರ್ಮ ಇರುತ್ತಿರಲಿಲ್ಲ. ದೇವರು ಸೃಷ್ಟಿಸಿದ ಧರ್ಮ ಇದ್ದರೆ ಅದು ಹಿಂದೂ ಧರ್ಮ ಆಗಿದೆ. ಇಂದು ನಮ್ಮ ಹಿಂದೂ ಧರ್ಮದ ಅಸ್ತಿತ್ವಕ್ಕೆ ಹೋರಾಟ ಮಾಡುವುದಾದರೆ ನಾವು ಎಡವಿದ್ದೆಲ್ಲಿ ಎಂದು ಯೋಚಿಸ ಬೇಕಾದ ಕಾಲ ಇದು. ನಮ್ಮಯುವಕರು ದೇವಸ್ಥಾನಕ್ಕೆ ಹೋಗಬೇಕಾಗಿತ್ತು ಆದರೆ ಅವ ಇವತ್ತು ಬಾರ್ ಗೆ ಹೋಗ್ತಾನೆ. ಯುವತಿಯರು ಟಿಕ್ ಟಾಕ್ ಮಾಡಿಕೊಂಡು ಕೂತಿದ್ದಾರೆ ಎಂಬ ಸ್ಥಿತಿ ಇದೆ. ನಮ್ಮ ಮನೆಯಲ್ಲಿ ಕಿಚ್ಚು ಹತ್ತುವ ಮುಂದೆ ಎಚ್ಚೆತ್ತುಕೊಳ್ಳಿ ಎಂದರು.

ಹಿಂದೂ ಸಂಘಟನೆಯಲ್ಲಿ ನಿಮ್ಮ ಮಕ್ಕಳನ್ನು ತೊಡಗಿಸಿಕೊಂಡರೆ ನಿಮ್ಮ ಮಕ್ಕಳು ನಿಮ್ಮನ್ನು ವೃದ್ದಾಶ್ರಮ ಸೇರಿಸಲು ಸಾಧ್ಯವಿಲ್ಲ. ಎಲ್ಲರೂ ರೈತ ಸೈನಿಕರನ್ನು ಬೆಳೆಸಿ ಉಳಿಸಿ ಎಂದರು.

                                             ಗುರುಪುರ ವಜ್ರದೇಹಿ ಮಠದ ಶ್ರೀ ಶ್ರೀ ರಾಜಶೇಖರನಂದ ಸ್ವಾಮೀಜಿ ಮಾತನಾಡಿ  ದೇಶದಲ್ಲಿ ಜಾತಿ ಮೀಸಲಾತಿ ಹೋರಾಟ ನಮ್ಮ ಹಿಂದೂ ಧರ್ಮಕ್ಕೆ ಅಪಾಯಕಾರಿ. ನಮ್ಮ ಮನೆಯ ಸಂಸ್ಕೃತಿ ಬದಲಾಗಿದೆ. ಆದ ಕಾರಣ ನಮ್ಮ ಮಕ್ಕಳು ಲವ್ ಜಿಹಾದ್ ಗೆ ಬಲಿಯಾಗುತಿದ್ದಾರೆ.. ನಮ್ಮ ಕಾನೂನು ಸದೃಡವಾಗಿಲ್ಲದ ಕಾರಣ ಧರ್ಮ ಸದೃಢವಾಗಲು ನಿಧಾನವಾಗುತ್ತಿದೆ. ಬೆಲೆ ಏರಿಕೆಯಾಗಿದೆ,  ರಸ್ತೆ ಅಭಿವೃದ್ಧಿಯಾಗಿಲ್ಲ, ತಡೆಗೋಡೆ ಆಗಿಲ್ಲ ಎಂದೆಲ್ಲ ಜನಪ್ರತಿನಿಧಿಗಳನ್ನು ಕೇಳುವ ಕಾಲ ಇದಲ್ಲ. ನಿಮ್ಮ ಆಯ್ಕೆ ಹಿಂದೂ ಹುಡುಗರೊಂದಿಗೆ ನಿಲ್ಲುವ ಶಾಸಕರಾಗಿರಲಿ ಎಂದರು.    
                                                   ಶ್ರೀಕಾಂತ್ ಶೆಟ್ಟಿ ಕಾರ್ಕಳ ದಿಕ್ಸೂಚಿ ಭಾಷಣ ಮಾಡುತ್ತಾ ಹಿಂದೂ ಧರ್ಮದ ಮಠ ಮಂದಿರ ಇಂದು ಉಳಿದಿದೆ  ಅಂದರೆ ಚತ್ರಪತಿ ಶಿವಾಜಿಯಿಂದಾಗಿ. ಸುಬ್ರಹ್ಮಣ್ಯಕ್ಕೆ ಅನ್ಯಮತೀಯರು ಬಂದು ತಮ್ಮ ಬುದ್ದಿ ತೋರಿಸಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ.  ಹಿಂದೂ ಯುವತಿಯರನ್ನು ಭೋಗದ ವಸ್ತುವಾಗಿ ನೋಡಿದರೆ ನಮ್ಮ ಹಿಂದೂಗಳು ಸುಮ್ಮನಿರುವುದಿಲ್ಲ. ಹಿಂದೂ ಸಮಾಜಕ್ಕೆ ದುಸ್ಥಿತಿ ಕೂಡ ಇದೆ. ಪಾಕಿಸ್ತಾನದಲ್ಲಿ ಹಿಂದೂಗಳ ಪರಿಸ್ಥಿತಿ ಹೇಗಿದ್ಯೋ ಅದೇ ಪರಿಸ್ಥಿತಿ ಭಾರತದಲ್ಲಿ ಮುಸ್ಲಿಂರಿಗೆ ಬರಬೇಕು ಅಂದವರು ಬಾಳ ಠಾಕ್ರೆ ಅದು ನಮ್ಮ ಮನಸ್ಸಿನಲ್ಲಿರಬೇಕು. ಹಿಂದೂ ಜಾಗರಣೆ ನಡೆಯಬೇಕು ಎಂದರು. 

ಅಧ್ಯಕ್ಷತೆಯನ್ನು ಮಾಜಿ ಜಿ.ಪಂ ಅಧ್ಯಕ್ಷ ವೆಂಕಟ್ ದಂಬೆಕೋಡಿ ವಹಿಸಿದ್ದರು.

ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲೆ ಇದರ ಅಧ್ಯಕ್ಷ ಡಾ। ಕೃಷ್ಣ ಪ್ರಸನ್ನ ಇವರ ಗೌರವ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಹಿಂದೂ ಹೃದಯ ಸಂಘ ಇದರ ಗೌರವಾಧ್ಯಕ್ಷ ಕಿಶೋರ್‍ ಶಿರಾಡಿ, ಕಾರ್ಯದರ್ಶಿ ಚಿದಾನಂದ ಕಂದಡ್ಕ ವೇದಿಕೆಯಲ್ಲಿದ್ದರು. ಹಿಂದೂ ಹೃದಯ ಸಂಗಮದ ಅಧ್ಯಕ್ಷ ರಾಜೇಶ್‌ ಎನ್ ಎಸ್ ಎಲ್ಲರನ್ನೂ ಸ್ವಾಗತಿಸಿದರು. ಕಿಶೋರ್ ಶಿರಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿಂದೂ ಹೃದಯ ಸಂಗಮದ ಕಾರ್ಯ ಸಲಹೆಗಾರ ಪದ್ಮಕುಮಾರ್ ಗುಂಡಡ್ಕ ವಂದಿಸಿದರು. ಹರಿಣಿ ಪುತ್ತೂರಾಯ ಕಾರ್ಯಕ್ರಮ ನಿರೂಪಿಸಿದರು.