ಮೇನಾಲ: ಕಾಲು ಜಾರಿ ಕೆರೆಗೆ ಬಿದ್ದು ವ್ಯಕ್ತಿ ಮೃತ್ಯು

0

ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಮೇನಾಲ ಸಮೀಪದಿಂದ ವರದಿಯಾಗಿದೆ

ಮೇನಾಲ ಸಮೀಪದ ಸ್ಥಳೀಯ ನಿವಾಸಿ ಅಬ್ದುಲ್ಲ (ಅಂದ) (51 ವರ್ಷ) ಮೃತಪಟ್ಟ ವ್ಯಕ್ತಿ. ಜ.29 ರಂದು ಸಂಜೆ ಅಬ್ದುಲ್ಲ ಅವರು ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಆಕಸ್ಮಿಕ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟರು.

ತೋಟದಲ್ಲಿ ಕೆಲಸ ಮಾಡಿಕೊಂಡಿದ್ದವರು ಕಾಣದೆ ಇದ್ದಾಗ ಮನೆಯವರು ಅವರನ್ನು ತೋಟದ ಅಕ್ಕ ಪಕ್ಕದಲ್ಲಿ ಹುಡುಕಲು ಆರಂಭಿಸಿದ್ದು ಕೆರೆಯ ಸಮೀಪ ಅವರು ಕೆಲಸಕ್ಕೆ ಬಳಸುತ್ತಿದ್ದ ಸಾಮಾಗ್ರಿ ಇರುವುದನ್ನು ಕಂಡು ಕೆರೆಯಲ್ಲಿ ನೋಡಿದಾಗ ಅಲ್ಲಿ ಅವರು ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ.

ಅವರಿಗೆ ಬಹಳ ಸಮಯದಿಂದ ಪಿಡ್ಸ್ ಕಾಯಿಲೆ ಇದ್ದು ಆಗಾಗ ಈ ಕಾಯಿಲೆಗೆ ತುತ್ತಾಗಿ ಏಕಾಏಕಿ ಬೀಳುತ್ತಿದ್ದರು ಎನ್ನಲಾಗಿದೆ. ಈ ಘಟನೆಗೂ ಕೂಡ ಇದೇ ಕಾರಣವಿರಬಹುದೆಂದು ಊಹಿಸಲಾಗಿದೆ.

ಸ್ಥಳಕ್ಕೆ ಸುಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತ ದೇಹವನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಪೋಸ್ಟ್ಮಾರ್ಟಮಿಗಾಗಿ ಕಳುಹಿಸಿಕೊಟ್ಟಿದ್ದಾರೆ.

ಮೃತರು ಪತ್ನಿ ಹಾಗೂ ಮೂವರು ಪುತ್ರರನ್ನು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here