ಭಾರತ್ ಜೋಡೋ ಯಾತ್ರೆ ಯ ಸಮಾಪನ ಧ್ವಜಾರೋಹಣ ಅಂಗವಾಗಿ ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಧ್ವಜಾರೋಹಣ ಹಾಗೂ ಮಹಾತ್ಮಗಾಂಧಿ ಯವರ ಪುಣ್ಯಸ್ಮರಣೆ

0

ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಸಮಾಪನ ಕುರಿತು ಎ ಐ ಸಿ ಸಿ ಆದೇಶದ ಮೇರೆಗೆ ಜನವರಿ 30 ರಂದು ಭಾರತ್ ಜೋಡೋ ಯಾತ್ರೆಯ ಸಮಾಪನ ಧ್ವಜಾರೋಹಣ ಹಾಗೂ ಮಹಾತ್ಮ ಗಾಂಧಿಯವರ ಪುಣ್ಯಸ್ಮರಣೆ ಕಾರ್ಯಕ್ರಮ ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶಿವ ಕೃಪ ಕಲಾ ಮಂದಿರದಲ್ಲಿ ಇಂದು ಆಚರಿಸಲಾಯಿತು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ ಸಿ ಜಯರಾಮ ರವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಾಂಗಾಯ ಧ್ವಜಾರೋಹಣ ನೆರವೇರಿಸಿದರು.
ಬಳಿಕ ನಡೆದ ಸಮಾರಂಭದಲ್ಲಿ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ.
ಈ ಸಂದರ್ಭದಲ್ಲಿ ಮಾತನಾಡಿದ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ ಸಿ ಜಯರಾಮ್ ನಾವು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮಹಾತ್ಮ ಗಾಂಧೀಜಿಯವರ ಪುಣ್ಯ ಸ್ಮರಣೆಯನ್ನು ಮಾಡಲೇಬೇಕಾಗುತ್ತದೆ. ಕಾಲಗಳು ಕಳೆದಂತೆ ಈ ರೀತಿಯ ಮಹಾನ್ ವ್ಯಕ್ತಿಗಳ ಸ್ಮರಣೆಗಳನ್ನು ಕೆಲವು ವರ್ಗದವರು ಇಲ್ಲದಂತೆ ಮಾಡುವ ಪ್ರಯತ್ನದಲ್ಲಿ ತೊಡಗಿಕೊಂಡಿದ್ದಾರೆ.
ಆದ್ದರಿಂದ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದವರನ್ನು ನೆನಪಿಸಿಕೊಳ್ಳುವುದು ಮತ್ತು ಇತರರಿಗೆ ಅದರ ಅರಿವನ್ನು ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.


ದೇಶವನ್ನು ಜಾತಿ ಧರ್ಮ ಭೇದ ಭಾವವಿಲ್ಲದೆ ಜೋಡಿಸಲು ಕಳೆದ ಕೆಲವು ತಿಂಗಳುಗಳಿಂದ ರಾಹುಲ್ ಗಾಂಧಿಯವರ ಭಾರತ್ ಜೋಡು ಯಾತ್ರೆಯ ಸಮಾರೋಪ ದಿನವಾದ ಇಂದು ಸಮಾಪನ ಧ್ವಜಾರೋಹಣವನ್ನು ನಾವು ಇಂದು ಎ ಐ ಸಿ ಸಿ ಆದೇಶದ ಮೇರೆಗೆ ಆಚರಿಸುತ್ತಿದ್ದೇವೆ ಎಂದು ಹೇಳಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಮಾತನಾಡಿ ಈ ಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದು ಖಚಿತವಾಗಿದ್ದು ಇದಕ್ಕಾಗಿ ನಮ್ಮ ಸುಳ್ಯ ಭಾಗದ ಪ್ರತಿಯೊಬ್ಬ ನಾಯಕರು ಮತ್ತು ಕಾರ್ಯಕರ್ತರು ಮನಸೋ ಇಚ್ಛೆಯಿಂದ ಕೆಲಸ ಕಾರ್ಯಗಳನ್ನು ಮಾಡಬೇಕಾಗಿದೆ.
ಇದೇ ಫೆಬ್ರವರಿ ಐದರಂದು ಕಾಂಗ್ರೆಸ್ ಪಕ್ಷದ ವತಿಯಿಂದ ನಡೆಯಲಿರುವ ಕರಾವಳಿ ಧ್ವನಿ ಕಾರ್ಯಕ್ರಮ ಸುಳ್ಯ ತಾಲೂಕಿನಿಂದ ಆರಂಭವಾಗಲಿದ್ದು ಇದಕ್ಕೆ ಪಕ್ಷದ ರಾಜ್ಯದ ಮುಖಂಡರುಗಳು ತಾವೇ ಮುಂದೆ ಬಂದು ಸುಳ್ಯ ತಾಲೂಕನ್ನು ಆಯ್ಕೆ ಮಾಡಿರುವ ಹಿನ್ನೆಲೆಯಲ್ಲಿ ನಾವೆಲ್ಲರೂ ಸಂಘಟಿತರಾಗಿ ಈ ಕಾರ್ಯಕ್ರಮವನ್ನು ಯಶಸ್ವಿ ಮಾಡಬೇಕೆಂದು ಕೇಳಿಕೊಂಡರು.

ಬಳಿಕ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಪಗಾಯ ಕಳೆದ 140 ದಿನಗಳ ಮೊದಲು ಮಾನ್ಯ ರಾಹುಲ್ ಗಾಂಧೀಜಿಯವರು ಕನ್ಯಾಕುಮಾರಿಯಿಂದ ಸಮಗ್ರ ಭಾರತ ನಿರ್ಮಾಣಕ್ಕಾಗಿ ಭಾರತ ಜೋಡೋ ಯಾತ್ರೆಯನ್ನು ಆರಂಭಿಸಿ ಯಾತ್ರೆಯ ಸಮಾಪನ ದಿನವನ್ನು ಇಂದು ಆಚರಿಸುತ್ತಿದ್ದಾರೆ. ಇವರ ಯಾತ್ರೆಯು ಇಂದು ಇಡೀ ದೇಶವನ್ನೇ ಒಗ್ಗೂಡಿಸಿದೆ. ಈ ಒಂದು ಶಕ್ತಿಯನ್ನು ಮುಂದಿನ ದಿನಗಳಲ್ಲಿ ನಾವು ಅದನ್ನು ಸಂರಕ್ಷಿಸುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ಬಳಿಕ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಮ್ ವೆಂಕಪ್ಪಗೌಡ ಮಾತನಾಡಿ ಮಹಾತ್ಮ ಗಾಂಧೀಜಿಯವರು ಮತ್ತು ರಾಹುಲ್ ಗಾಂಧಿಯವರು ಒಂದೇ ರೀತಿಯ ಉದ್ದೇಶವನ್ನು ಇಟ್ಟುಕೊಂಡವರಾಗಿದ್ದಾರೆ. ಮಹಾತ್ಮ ಗಾಂಧಿಯವರು ಬ್ರಿಟಿಷರಿಂದ ದೇಶವನ್ನು ಕಾಪಾಡಲು ಮುಂದಾದರೆ ರಾಹುಲ್ ಗಾಂಧಿಜಿಯವರು ಇತ್ತೀಚಿಗೆ ದೇಶವನ್ನು ಹೊಡೆಯುವವರಿಂದ ರಕ್ಷಿಸಲು ಹೋರಾಟವನ್ನು ಮಾಡುತ್ತಿದ್ದಾರೆ.
ಆದ್ದರಿಂದ ಕಾಂಗ್ರೆಸ್ ಪಕ್ಷ ಜಾತ್ಯತೀತವಾಗಿ ಎಲ್ಲರ ಸೇವೆಯನ್ನು ಮಾಡುವಂತಹ ಪಕ್ಷವಾಗಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎನ್ ಜಯಪ್ರಕಾಶ್ ರೈ, ಕೆಪಿಸಿಸಿ ಸಂಯೋಜಕ ಟಿ ಎಂ ಶಹೀದ್, ಕೆಪಿಸಿಸಿ ಮಾಜಿ ಸದಸ್ಯರು ಡಾ. ರಘು, ಸುಳ್ಯ ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಗೀತಾ ಕೋಲ್ಚಾರ್, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಅಧ್ಯಕ್ಷ ಸಚಿನ್ ರಾಜ್ ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರುಗಳಾದ ಸೋಮಶೇಖರ್ ಕೋಯಿಂಗಾಜೆ, ಮಹಮ್ಮದ್ ಕುಂಜಿ ಗೂನಡ್ಕ,ಕೆ ಎಮ್ ಮುಸ್ತಫಾ ಜನತಾ, ಆನಂದ ಬೆಳ್ಳಾರೆ, ಬಾಪು ಸಾಹೇಬ್, ಅಬ್ದುಲ್ ಗಪೂರ್ ಕಲ್ಮಡ್ಕ, ಸುಳ್ಯ ತಾಲೂಕು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಸ್ಮಾಯಿಲ್ ಪಡಿಪಿನಂಗಡಿ, ಗೋಕುಲ್ ದಾಸ್, ಶಾಪಿ ಕುತ್ತಮಟ್ಟೆ, ರಾಜಾರಾಮ್ ಭಟ್, ದಿನೇಶ್ ಅಂಬೆಕಲ್ಲು, ಬಾಲಕೃಷ್ಣ ಭಟ್ ಕೊಡಂಕೇರಿ, ಜತ್ತಪ್ಪ ಗೌಡ, ಅಶೋಕ್ ಚೂಂತರ್, ಅನಿಲ್ ಬಳ್ಳಡ್ಕ, ಶ್ರೀಮತಿ ಚಿತ್ರಕುಮಾರಿ ಉಬರರ್ಡ್ ಮಿತ್ತೂರು, ಅನಿಲ್ ರೈ ಬೆಳ್ಳಾರೆ, ಮಜೀದ್ ನಡುವಡ್ಕ, ಸುರೇಶ್ ಅಮೈ, ಸಂಶುದ್ದಿನ್ ಎಸ್, ಸಿದ್ದೀಕ್ ಕೊಕ್ಕೊ, ಸುಳ್ಯ ತಾಲೂಕು ಮಹಿಳಾ ಕಾಂಗ್ರೇಸ್ ಉಪಾಧಕ್ಷೆ ಸುಜಯ ಕೃಷ್ಣ ಹಾಗೂ 60ಕ್ಕೂ ಹೆಚ್ಚು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರುಗಳು ಮುಖಂಡರುಗಳು ಭಾಗವಹಿಸಿದ್ದರು.
ಸಭೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪಕ್ಷದ ಬಲವರ್ಧನೆಗಾಗಿ ಬೇರೆ ಬೇರೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು,
ಈಗಾಗಲೇ ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿರುವಂತಹ ಗೃಹಲಕ್ಷ್ಮಿ ಯೋಜನೆ ಮತ್ತು ಗೃಹಜ್ಯೋತಿ ಯೋಜನೆಯ ಗ್ಯಾರೆಂಟಿ ಪತ್ರವನ್ನು ಬೂತು ಮಟ್ಟದಲ್ಲಿ ಮನೆ ಮನೆಗೆ ತಲುಪಿಸುವ ಕಾರ್ಯವನ್ನು ನಾಯಕರು ಮತ್ತು ಕಾರ್ಯಕರ್ತರಿಂದ ಆಗಬೇಕೆಂದು ಚರ್ಚೆಗಳು ನಡೆದವು.
ಪ್ರಧಾನ ಕಾರ್ಯದರ್ಶಿ ಪಿಎಸ್ ಗಂಗಾಧರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here