ಮಹಾತ್ಮ ಗಾಂಧೀಜಿ ಪುಣ್ಯತಿಥಿ ಪ್ರಯುಕ್ತ ಸುಳ್ಯ ನಗರದಲ್ಲಿ ಸ್ವಚ್ಚತಾ ಅಭಿಯಾನ

0

ನಗರದಾದ್ಯಂತ ಸ್ವಯಂ ಪ್ರೇರಿತವಾಗಿ ಸ್ವಚ್ಚತೆಯಲ್ಲಿ ತೊಡಗಿಸಿಕೊಂಡ ಜನತೆ

ಮಹಾತ್ಮ ಗಾಂಧೀಜಿಯವರ ಪುಣ್ಯತಿಥಿಯ ಅಂಗವಾಗಿ ಗಾಂಧೀಜಿಯವರ ಸ್ವಚ್ಚ ಭಾರತದ ಕಲ್ಪನೆಯಂತೆ ಸುಳ್ಯ‌ ನಗರ ಪಂಚಾಯತ್ ಕರೆಯ ಮೇರೆಗೆ ನಗರ ದಲ್ಲಿ‌ ಇಂದು ಸಂಜೆ ಸ್ವಚ್ಚತಾ ಅಭಿಯಾನ‌ ನಡೆಯಿತು.

ಸಂಜೆ 4 ರಿಂದ 4.30 ರ ತನಕ ನಡೆದ ಸ್ವಚ್ಚತಾ ಅಭಿಯಾನದಲ್ಲಿ ಸಂಘ ಸಂಸ್ಥೆಗಳವರು, ವರ್ತಕರು, ಸಾರ್ವಜನಿಕರು, ಕೆ.ವಿ.ಜಿ. ಸಹಿತ ವಿವಿಧ ವಿದ್ಯಾಸಂಸ್ಥೆ ಯವರು, ಸರಕಾರಿ ಇಲಾಖೆಗಳವರು ಸ್ವಯಂ ಪ್ರೇರಿತವಾಗಿ ಭಾಗವಹಿಸಿದರು.

ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ರವರು ನ.ಪಂ. ವಾಹನದಲ್ಲಿ ಮೈಕ್ ಹಿಡಿದು ಸ್ವಚ್ಚತೆಯಲ್ಲಿ‌ ಭಾಗವಹಿಸುವಂತೆ ವಿನಂತಿಸಿದರಲ್ಲದೆ, ಸ್ವಚ್ಚತೆಯ ಕುರಿತು ಜಾಗೃತಿ ‌ಮೂಡಿಸಿದರು.

LEAVE A REPLY

Please enter your comment!
Please enter your name here