ಕುಲ್ಕುಂದ ಬಸವೇಶ್ವರ ದೇವಸ್ಥಾನದಲ್ಲಿ 108 ಸಾಮೂಹಿಕ ಸೂರ್ಯ ನಮಸ್ಕಾರ

0

ರಥಸಪ್ತಮಿ ಪ್ರಯುಕ್ತ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಆಶಯದಲ್ಲಿ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದದ ಶ್ರೀ ಬಸವೇಶ್ವರ ದೇವಸ್ಥಾನದ ವಠಾರದಲ್ಲಿ ಸಾಮೂಹಿಕ 108 ಸೂರ್ಯ ನಮಸ್ಕಾರ ಸುಬ್ರಹ್ಮಣ್ಯ ಹಾಗೂ ಪಂಜ ಶಾಖಾವತಿಯಿಂದ ಜ.29 ರಂದು ನಡೆಯಿತು.

ಕಾರ್ಯಕ್ರಮದ ಆರಂಭದಲ್ಲಿ ಸುಬ್ರಹ್ಮಣ್ಯ ಶಾಖೆಯ ವೆಂಕಟೇಶ್ ಅವರಿಂದ ಭಜನೆ ನಡೆಯಿತು. ನಂತರ ಅಮೃತವಚನವನ್ನು ಪಂಚಶಖೆಯ ಸುದರ್ಶನ ಹಾಗೂ ಪಂಚಾಂಗ ಪಟ್ಟಣವನ್ನು ಕುಸುಮಾದರ ನಡೆಸಿಕೊಟ್ಟರು ನಂತರ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆ ಮೂಲಕ ಶ್ರೀ ಬಸವೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಿರಿಧರ ಸ್ಕಂದ ಹಾಗೂ ಪ್ರಧಾನ ಅರ್ಚಕ ಗಣೇಶ್ ದೀಕ್ಷಿತ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ತಾಲೂಕು ಶಿಕ್ಷಣ ಪ್ರಮುಖರಾದ ಕಾವೂರು ಶಾಖೆಯ ಗಣೇಶ್, ಸುಬ್ರಹ್ಮಣ್ಯ ಶಾಖೆಯ ಸಂಚಾಲಕ ಪ್ರಭಾಕರ ಪಡ್ರೆ ಉಪಸ್ಥಿತರಿದ್ದರು.

ರಥಸಪ್ತಮಿಯ ಬಗ್ಗೆ ಬೌದ್ಧಿಕವನ್ನು ಸುಬ್ರಹ್ಮಣ್ಯ ಶಾಖೆಯ ಶ್ರೀ ಕೃಷ್ಣ ಶರ್ಮ ನಡೆಸಿಕೊಟ್ಟರು. ನಂತರ ನಡೆದ 108 ಸೂರ್ಯ ನಮಸ್ಕಾರದ ಪ್ರಥಮ ದ್ವಿತೀಯ ಹಾಗೂ ತೃತೀಯ ಸುತ್ತಿನಲ್ಲಿ ನಿರ್ವಹಣೆಯನ್ನು ಸುಬ್ರಹ್ಮಣ್ಯ ಶಾಖೆಯ ಅಶ್ವಿಜಾ, ಬಾಲಕೃಷ್ಣ, ಹಾಗೂ ಲೀಲಾ ಮತ್ತು ಪ್ರಾತ್ಯಕ್ಷತೆಯನ್ನು ಪ್ರಭಾಕರ ಪಟ್ರೆ, ಜಯಶ್ರೀ, ಬಾಲಕೃಷ್ಣ, ರಾಜೇಶ್ವರಿ, ವಿಮಲಾ, ನಾಗರಾಜ ನಡೆಸಿಕೊಟ್ಟರು. ತದನಂತರ ಅಮೃತಸನವನ್ನು ತಾಲೂಕು ಶಿಕ್ಷಣ ಪ್ರಮುಖರಾದ ಗಣೇಶ್ ಅವರು ನಡೆಸಿದರು,.ಸುಬ್ರಹ್ಮಣ್ಯ ಶಾಖೆಯ ವಿಶ್ವನಾಥ ನಡುತೋಟ ನಿರೂಪಿಸಿದರು. ಚಂದ್ರಶೇಖರ ನಾಯರ್ ವಂದಿಸಿದರು.