ಕೊಲ್ಲಮೊಗ್ರ : ಕಟ್ಟ ಕೊಚ್ಚಿಲ ಶ್ರೀ ಮಯೂರವಾಹನ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಸಂಪನ್ನ

0


ಕಟ್ಟ ಕೊಚ್ಚಿಲ ಶ್ರೀ ಮಯೂರವಾಹನ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಮಹೋತ್ಸವವು ಜ.27 ರಿಂದ ಕೋಡಿಯಡ್ಕ ವೇದಮೂರ್ತಿ ತಂತ್ರಿ ಕಿಳಿಂಗಾರು ಶ್ರೀ ಶಿವರಾಮ ಭಟ್‌ರವರ ನೇತೃತ್ವದಲ್ಲಿ ನಡೆಯಿತು.

ಜ.26ರ  ಸಂಜೆ ಹಸಿರುವಾಣಿ ಸಮರ್ಪಣೆ ನಡೆದಿದ್ದು ಜ.27 ರಂದು ಬೆಳಗ್ಗೆ ಶ್ರೀ ಗಣಪತಿಹವನ ನಡೆಯಿತು. ಬಳಿಕ ಶ್ರೀ ಮಯೂರ ಭಜನಾ ಮಂಡಳಿ ಕಟ್ಟ ಗೋವಿಂದ ನಗರ, ಶ್ರೀ ಅಯ್ಯಪ್ಪ ಭಜನಾ ಮಂಡಳಿ ಶಕ್ತಿನಗರ ಕಲ್ಮಕಾರು ಹಾಗೂ ಹರಿಹರೇಶ್ವರ ಭಜನಾ ಮಂಡಳಿ ಕೊಲ್ಲಮೊಗ್ರು ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.

ಮಧ್ಯಾಹ್ನವರೆಗೆ ಕಲಾಭಿಷೇಕ, ನಾಗತಂಬಿಲ ನಡೆದು ಮಹಾಪೂಜೆ, ಮಂತ್ರಾಕ್ಷತೆ, ಅನ್ನಸಂತರ್ಪಣೆ ನಡೆಯಿತು. ರಾತ್ರಿ ಕಟ್ಟ ಚಾವಡಿಯಿಂದ ದೈವಗಳ ಭಂಡಾರ ತೆಗೆಯುವ ಕಾರ್ಯಕ್ರಮ ನಡೆದು ರಾತ್ರಿ
ವಿಶೇಷ ಕಾರ್ತಿಕ ಪೂಜೆ ನಡೆಯಿತು ಬಳಿಕ ಅನ್ನಸಂತರ್ಪಣೆ ನಡೆಯಿತು.
  ಜ.28 ರ ಪೂರ್ವಾಹ್ನ ದೈವಗಳ ನೇಮ ನಡೆದಿದ್ದು, ಅಪರಾಹ್ನ ದೇವಸ್ಥಾನದಿಂದ ಮಿತ್ತೋಡಿಗೆ  ಭಂಡಾರ ಹೋಗಲಿದೆ. ರಾತ್ರಿ ಚಾಳೆಪ್ಪಾಡಿ ಗಾಣಿಗಮಜಲು ವಿನಲ್ಲಿ ಶ್ರೀ ಅಗ್ನಿಗುಳಿಗರಾಜ ನೇಮೋತ್ಸವ ನಡೆಯಿತು. ಜ.29 ರಂದು ಬೆಳಗ್ಗೆ ಮಿತ್ತೋಡಿಯಲ್ಲಿ ದೈವಗಳ ನೇಮ ನಡೆದಿದ್ದು ಅಪರಾಹ್ನ ಕಟ್ಟ ಚಾವಡಿಗಳಿಗೆ ದೈವಗಳ ಭಂಡಾರವನ್ನು ಮತ್ತೆ ತಂದಿರಿಸಲಾಯಿತು.

ಸಾಂಸ್ಕ್ರತಿಕ, ಧಾರ್ಮಿಕ ಸಭೆ:
ಜ.27 ರ ಸಂಜೆ ಅಂಗನವಾಡಿ, ಕಟ್ಟ ಗೋವಿಂದ ನಗರ ಕಿರಿಯ ಪ್ರಾಥಮಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದ್ದು ಶ್ರೀ ಕೋದಂಡರಾಮ ಕೃ‍ಪಾಪೋಸಿತ ಯಕ್ಷಗಾನ ಮಂಡಳಿ ವತಿಯಿಂದ ಶುಕ್ರನಂದನೆ ಯಕ್ಷಗಾನ ನಡೆಯಿತು. ಯಕ್ಷಗಾನದ ಮೊದಲು ಧಾರ್ಮಿಕ ಸಭೆ ನಡೆದಿದ್ದು ಅಧ್ಯಕ್ಷತೆಯನ್ನು ಕಟ್ಟ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯಪ್ರಕಾಶ್ ಕಟ್ಟ ವಹಿಸಿದ್ದರು.


ಎಸ್ ಎಸ್ ಪಿ ಯು ಕಾಲೇಜಿನ ಪ್ರೌಢಶಾಲಾ ಮುಖ್ಯೋಪಾಧ್ಯಾಯ
ಯಶವಂತ ರೈ ಮರ್ಧಾಳ ದಾರ್ಮಿಕ ಪ್ರವಚನ ನಡೆಸಿದರು.


ಮುಖ್ಯ ಅತಿಥಿಯಾಗಿ ಕೊಲ್ಲಮೊಗ್ರು ಹರಿಹರ ಪ್ರಾ.ಕೃ.ಪ ಸಹಕಾರಿ ಸಂಘದ ಅಧ್ಯಕ್ಷ ಹರ್ಷಕುಮಾರ್ ಡಿ.ಎಸ್, ಕಟ್ಟ ದೇವಸ್ಥಾನದ ಗೌರವಾಧ್ಯಕ್ಷ, ನಾರಾಯಣಯ್ಯ ಕಟ್ಟ , ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಒಕ್ಕೂಟದ ಅಧ್ಯಕ್ಷ ತೀರ್ಥರಾಮ ದೋಣಿಪಳ್ಳ, ವಸಂತಿ ಕಟ್ಟ ವೇದಿಕೆಯಲ್ಲಿದ್ದರು. ಸಭೆಯಲ್ಲಿ ದೇವಸ್ಥಾನಕ್ಕೆ ಸ್ಥಳದಾನವನ್ನು ನೀಡಿದ ಶಿವಪ್ರಸಾದ್ ಕಟ್ಟ ಹಾಗು ಮನೆಯವರನ್ನು ಸನ್ಮಾನಿಸಲಾಯಿತು.


ಮಿತ್ತೋಡಿ ದೈವಸ್ಥಾನದ ಪ್ರದಾನ ಪೂಜಾರಿಯಾಗಿ ನಿವೃತ್ತಿ ಹೊಂದಿದ ಶಿವರಾಮ ಚಾಳೆಪ್ಪಾಡಿ ಇವರನ್ನು ಗೌರವಿಸಲಾಯಿತು.