ನಾಟಿವೈದ್ಯೆ ಕಲ್ಯಾಣಿ ಮಹಾಬಲಡ್ಕ ನಿಧನ

0

ಜಾಲ್ಸೂರು ಗ್ರಾಮದ ಮಹಾಬಲಡ್ಕ ದಿ. ಕುಂಞಿಕಣ್ಣನ್ ಬೆಳ್ಚಪ್ಪಾಡರ ಧರ್ಮಪತ್ನಿ ನಾಟಿವೈದ್ಯೆ ಶ್ರೀಮತಿ ಕಲ್ಯಾಣಿ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಜ.29ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 96 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರ ನಾರಾಯಣ ಬೆಳ್ಚಪ್ಪಾಡ, ಪುತ್ರಿಯರಾದ ಶಾರದಾ ಪದವು, ಶ್ರೀಮತಿ ಕಾರ್ತ್ಯಾಯಿನಿ ವಿರಾಜಪೇಟೆ, ಶ್ರೀಮತಿ ಯಶೋಧ ಮಹಾಬಲಡ್ಕ, ಶ್ರೀಮತಿ ಲಕ್ಷ್ಮೀ ಪದವು, ನಾರಾಯಣಿ ಪದವು, ಉಷಾ ಪದವು, ಅಳಿಯಂದಿರು, ಸೊಸೆ, ಮೊಮ್ಮಕ್ಕಳು , ಮರಿಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.