ಜಾಲ್ಸೂರು: ರಸ್ತೆ ಮಧ್ಯೆ ಕಾರು ತಡೆದು ಮಹಿಳೆಗೆ ಹಲ್ಲೆ ಯತ್ನ – ಪೊಲೀಸ್ ದೂರು ದಾಖಲು

0

ಮಹಿಳೆಯೊಬ್ಬರು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ. ಆ ಮಹಿಳೆಯ ಪತಿಯೆನ್ನಲಾದ ವ್ಯಕ್ತಿ ಬೈಕಲ್ಲಿ ಬಂದು ಕಾರನ್ನು ಅಡ್ಡಗಟ್ಟಿ ನಿಲ್ಲಿಸಿ, ಮಹಿಳೆಯ ಮೇಲೆ ಹಲ್ಲೆಗೆ ಯತ್ನಿಸಿದ ಹಾಗೂ ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರನ್ನು ಕಂಡು ಮಹಿಳೆಯ ಪತಿ ಪರಾರಿಯಾದ ಮತ್ತು ಪೋಲೀಸರು ಮಹಿಳೆಯನ್ನು ಸುಳ್ಯ ಠಾಣೆಗೆ ಕರೆದುಕೊಂಡು ಹೋದ ಘಟ‌ನೆ ಜಾಲ್ಸೂರಿನಲ್ಲಿ ಜ.31ರಂದು ಸಂಜೆ ಸಂಭವಿಸಿದೆ.


ಕೇರಳ ಮೂಲದ ಮಹಿಳೆಯೋರ್ವರು ಸುಳ್ಯದ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದು, ಜ.31ರಂದು ಸಂಜೆ ಮಹಿಳೆಯು ಬಾಡಿಗೆ ಕಾರೊಂದರಲ್ಲಿ ಪುತ್ತೂರಿನಿಂದ ಸುಳ್ಯ ಕಡೆಗೆ ಬರುತ್ತಿದ್ದ ಸಂದರ್ಭದಲ್ಲಿ ಜಾಲ್ಸೂರಿನ ಕಾಳಮನೆ ಎಂಬಲ್ಲಿಗೆ ಬೈಕ್ ನಲ್ಲಿ ಬಂದ ಮಹಿಳೆಯ ಪತಿ ಕಾರನ್ನು ತಡೆದು ನಿಲ್ಲಿಸಿ, ಮಹಿಳೆ ಮೇಲೆ ಹಲ್ಲೆಗೆ ಯತ್ನಿಸಿದರು.


ಈ ವೇಳೆ ಜಾಲ್ಸೂರಿನಲ್ಲಿದ್ದ ಸುಳ್ಯ ಪೊಲೀಸರಿಗೆ ವಿಷಯ ತಿಳಿದು ಅವರು ಸ್ಥಳಕ್ಕೆ ಆಗಮಿಸಿದಾಗ ಮಹಿಳೆಯ ಪತಿ ಬೈಕ್ ನಲ್ಲಿ ಪರಾರಿಯಾಗಿದ್ದು, ಮಹಿಳೆಯನ್ನು ಪೋಲೀಸರು ಸುಳ್ಯ ಪೊಲೀಸ್ ಠಾಣೆಗೆ ಕರೆದೊಯ್ದರು. ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ತಿಳಿದುಬಂದಿದೆ. ಪತಿ ಅಡ್ಡಗಟ್ಟಿ ಹಲ್ಕೆಗೆ ಯತ್ನಿಸಿದ್ದೇಕೆಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.