ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ರೆಂಜಾಳ ಜಾತ್ರೋತ್ಸವ ಸಂಪನ್ನ

0

ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳಿಗೊಳಪಟ್ಟ ಪಂಚಸ್ಥಾಪನೆಗಳಲ್ಲಿ ಒಂದಾದ ರೆಂಜಾಳ ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವರ ವಾರ್ಷಿಕ ಜಾತ್ರೋತ್ಸವವು ನಿನ್ನೆ ಭಕ್ತಿ-ಸಂಭ್ರಮ-ಸಡಗರದೊಂದಿಗೆ ಸಂಪನ್ನಗೊಂಡಿತು.

ಬೆಳಿಗ್ಗೆ 7ರಿಂದ ಗಣಪತಿ ಹೋಮ, ಬಿಂಬಶುದ್ಧಿ, ಕಲಶಪೂಜೆ, ಬಿಂಬ ಶುದ್ಧಿ ಕಲಶಾಭಿಷೇಕ, ಸಾನ್ನಿಧ್ಯ ಕಲಶ ಪೂಜೆ, ಸಾನ್ನಿಧ್ಯ ಕಲಶಾಭಿಷೇಕ ಹಾಗೂ ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.


ಸಂಜೆ 7.00ಕ್ಕೆ ರಾತ್ರಿ ಪೂಜೆ ಬಳಿಕ ಭೂತಬಲಿ, ಸೇವಾಬಲಿಗಳು, ನೃತ್ಯಬಲಿ, ಬಟ್ಟಲುಕಾಣಿಕೆ, ರಾಜಾಂಗಣಪ್ರಸಾದ, ಸಂಪ್ರೋಕ್ಷಣೆ, ಮಂತ್ರಾಕ್ಷತೆ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮ : ಸಂಜೆ 5.00ರಿಂದ ರೆಂಜಾಳ ಮತ್ತು ದಾಸಬೈಲು ಅಂಗನವಾಡಿ ಪುಟಾಣಿಗಳಿಂದ ಸಾಂಸ್ಕೃತಿಕ ರಸಸಂಜೆ ನಡೆಯಿತು. ಹಾಗೂ ಬಾಲಪ್ರತಿಭೆ ಕು| ಪ್ರಣನ್ಯ ಕುದ್ಪಾಜೆಯವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.

ಮತ್ತು ಅನ್ನಪೂರ್ಣ ಸಮಿತಿಯ ಅಧ್ಯಕ್ಷ ಚಿನ್ನಪ್ಪ ಗೌಡ ಬೇರಿಕೆಯವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. ರಾತ್ರಿ ದೇವರ ಬಟ್ಟಲು ಕಾಣಿಕೆ ನಡೆದ ಬಳಿಕ ಶ್ರುತಿ ಗಾಯನ ಮೆಲೋಡಿಸ್ ದ.ಕ. ಮತ್ತು ಕಾಸರಗೋಡಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಗಾನ-ನೃತ್ಯ-ಕುಂಚ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಒಂದುವರೆ ಸಾವಿರಕ್ಕೂ ಮಿಕ್ಕಿ ಭಕ್ತಾಧಿಗಳು ಆಗಮಿಸಿ ಶ್ರೀ ದೇವರ ಪ್ರಸಾದ ಸ್ವೀಕರಿಸಿದರು.