ಹಳೆಗೇಟಿನಿಂದ ಜಯನಗರ ಸಂಪರ್ಕಿಸುವ ರಸ್ತೆಯಲ್ಲಿ ಅಪಾಯಕಾರಿ ಮರ

0

ತೆರವುಗೊಳಿಸಿಕೊಡುವಂತೆ ಸ್ಥಳೀಯರ ಮನವಿ

ಹಳೆಗೇಟಿನಿಂದ ಜಯನಗರಕ್ಕೆ ಸಂಪರ್ಕಿಸುವ ಮುಖ್ಯರಸ್ತೆಯಲ್ಲಿ ಬೃಹತ್ ಮರವೊಂದು ಅಪಾಯಕಾರಿ ಸ್ಥಿತಿಯಲ್ಲಿದ್ದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಜಯನಗರ ಮಿಲಿಟರಿ ಗ್ರೌಂಡ್ ಪ್ಲಂಬರ್ ಇಬ್ರಾಹಿಂ ರವರ ಮನೆಯ ಮುಂಭಾಗದಲ್ಲಿ ಕಳೆದ ಮಳೆಗಾಲದ ಸಂದರ್ಭ ಸಿಡಿಲು ಬಡಿದು ಬೃಹತ್ ಮರಕ್ಕೆ ಹಾನಿ ಉಂಟಾಗಿತ್ತು. ಇದೀಗ ದಿನ ಕಳೆದಂತೆ ಮರ ಸಂಪೂರ್ಣವಾಗಿ ಒಣಗಿ ಹೋಗಿದ್ದು ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.


ಸುಮಾರು ನೂರು ಅಡಿಗಳ ಎತ್ತರವಿರುವ ಈ ಬೃಹತ್ ಮರ ಬಿದ್ದಲ್ಲಿ ಪರಿಸರದ ಮನೆಗಳು ಮತ್ತು ರಸ್ತೆಯಲ್ಲಿ ಸಂಚರಿಸುವ ವಾಹನಗಳು, ಪಾದಚಾರಿಗಳಿಗೆ, ಅಲ್ಲದೆ ಈ ಭಾಗದಿಂದ ಕುತ್ಪಾಜೆ ಕಡೆಗೆ ವಿದ್ಯುತ್ ಸಂಪರ್ಕಿಸುವ ತಂತಿಗಳು, ವಿದ್ಯುತ್ ಕಂಬಗಳಿಗೆ ಹಾನಿ ಸಂಭವಿಸಲಿದ್ದು ಸಂಬಂಧಪಟ್ಟವರು ಕೂಡಲೇ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here