ಮೇದಿನಡ್ಕದಲ್ಲಿ ಗ್ರಾಮ ದೈವ ಮೇನಾಲ ಉಳ್ಳಾಕುಲು ದೈವದ ನೇಮೋತ್ಸವ, ಇಂದು ಮಧ್ಯಾಹ್ನ ರುದ್ರ ಚಾಮುಂಡಿ, ವರ್ಣಾರ ಪಂಜುರ್ಲಿ ನೇಮೋತ್ಸವ

0

ಅಜ್ಜಾವರ ಗ್ರಾಮದ ಗ್ರಾಮ ದೈವ ಮೇನಾಲದಲ್ಲಿ ಇಂದು ಮೇದಿನಡ್ಕ ಶ್ರೀ ಉಳ್ಳಾಕುಲು ಮಾಡ ಚಾವಡಿಯಲ್ಲಿ ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಯವರ ಮಾರ್ಗದರ್ಶನದಲ್ಲಿ ಇರ್ವೇರು ಉಳ್ಳಾಕುಲು ದೈವ ಹಾಗೂ ಪರಿವಾರ ದೈವಗಳ ನೇಮೋತ್ಸವ ನಡೆಯುತ್ತಿದೆ.

ಫೆ.೦೧ರಂದು ಬೆಳಗ್ಗೆ ಗಂಟೆ 6 ರಿಂದ ನಾಗತಂಬಿಲ (ಮೇದಿನಡ್ಕದಲ್ಲಿ),ಬಳಿಕ ಶ್ರೀ ಉಳ್ಳಾಕುಲು ಚಾವಡಿಯಲ್ಲಿ ಗಣಪತಿ ಹವನ, ಶುದ್ಧಿ ಕಲಶ ಮತ್ತು ದೈವಗಳಿಗೆ ತಂಬಿಲ, ಮೇದಿನಡ್ಕದಲ್ಲಿ ಉಗ್ರಾಣ ತುಂಬಿಸಲಾಯಿತು.


ಸಂಜೆ ಮೇನಾಲ ಉಳ್ಳಾಕುಲು ಚಾವಡಿಯಿಂದ ಭಂಡಾರ ತೆಗೆದು ದೈಯರ ಮಂಟಪ, ರುದ್ರಚಾಮುಂಡಿ ಕಟ್ಟೆ, ಉಳ್ಳಾಕುಲ ಮಾಡಕ್ಕೆ ಹೋಗಿ ಮೇದಿನಡ್ಕ (ಕೊಡಿಯಡಿ) ದೈವ ನಡೆಯುವ ಸ್ಥಳಕ್ಕೆ ಬರಲಾಯಿತು. ರಾತ್ರಿ ಅನ್ನಸಂತರ್ಪಣೆ (ಮೇದಿನಡ್ಕದಲ್ಲಿ) ನಡೆಯಿತು. ರಾತ್ರಿ ೮ರಿಂದ ಕಾಂತಾರ ಚಿತ್ರ ಪ್ರದರ್ಶನ ನಡೆಯಿತು.
ಫೆ.೦೨ ಮುಂಜಾನೆ ಗಂಟೆ ೫ ರಿಂದ ಇರ್ವೆರು ಉಳ್ಳಾಕುಲು ದೈವದ ನೇಮ ನಡೆದ ಬಳಿಕ ಪ್ರಸಾದ ವಿತರಣೆ ನಡೆಯಿತು.

ಬೆಳಗ್ಗೆ ೧೦ ನಾಯರ್ ದೈವ ಮತ್ತು ಪುರುಷ ದೈವದ ನೇಮೋತ್ಸವ ಮಧ್ಯಾಹ್ನ ಅನ್ನಸಂತರ್ಪಣೆ ಮಧ್ಯಾಹ್ನ ಬಳಿಕ ರುದ್ರಚಾಮುಂಡಿ ದೈವದ ನೇಮೋತ್ಸವ, ಅಪರಾಹ್ನ ವರ್ಣರ ಪಂಜುರ್ಲಿ ದೈವದ ನೇಮೋತ್ಸವ. ಸಾಯಂಕಾಲ ಮೇದಿನಡ್ಕದಿಂದ ಉಳ್ಳಕುಲು ಚಾವಡಿಗೆ ಭಂಡಾರ ತರುವುದು.