ಪಂಜ ಜಾತ್ರೆಗೆ ಬಂಟಮಲೆಯಿಂದ ತೀರ್ಥ

0

ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ವರ್ಷಾವಧಿ ಜಾತ್ರಾ ಮಹೋತ್ಸವ ಆರಂಭಗೊಂಡಿದ್ದು ಫೆ.2 ರಂದು ಮುಂಜಾನೆ ಬಂಟಮಲೆಯ ತೀರ್ಥದ ಸ್ಥಳದಲ್ಲಿ ಪೂಜೆ ಸಲ್ಲಿಸಿ ಜಾತ್ರೆಗೆ ತೀರ್ಥ ತರಲಾಯಿತು.

ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪದ್ಮನಾಭ ರೈ ಅಗೋಳಿ ಬೈಲುಗುತ್ತು , ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ಸೀಮೆಯ ಭಕ್ತರು ಪಾಲ್ಗೊಂಡಿದ್ದರು.

ನಿತ್ಯಬಲಿ.ಫೆ.3.ರಂದು ಮಹಾಪೂಜೆ , ನಿತ್ಯಬಲಿ ಸಂಜೆ ಹಸಿರು ಕಾಣಿಕೆ ಮೆರವಣಿಗೆ ಪುತ್ಯ ಕಟ್ಟೆಯಿಂದ ಆರಂಭ ಗೊಂಡು ದೇವಳಕ್ಕೆ ಸಮರ್ಪಣೆ ಗೊಳ್ಳಲಿದೆ.ದಂಡಮಾಲೆ ಹಾಕಿ ಬಲಿ , ಬೇತಾಳ ಗಳು ಇಳಿಯುವುದು.ಫೆ4. ರಂದು ಶ್ರೀ ದೇವರ ಉತ್ಸವ, ಮಹಾ ಪೂಜೆ.ಫೆ.5 ರಂದು ಹಗಲು ಶ್ರೀ ದೇವರ ದರ್ಶನ ಬಲಿ.ಫೆ.6.ರಂದು ರಾತ್ರಿ ಶ್ರೀದೇವರ ಬ್ರಹ್ಮ ರಥೋತ್ಸವ ಜರುಗಲಿದೆ.

LEAVE A REPLY

Please enter your comment!
Please enter your name here