ಫೆ.13 ರಿಂದ ಫೆ.17 : ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ, *ಫೆ.17 ರಂದು ದರ್ಶನ ಬಲಿ, ಬಟ್ಟಲುಕಾಣಿಕೆ

0

ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಫೆ.13 ರಿಂದ ಫೆ 17ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.ಫೆ.09ರಂದು ಬೆಳಿಗ್ಗೆ ಗಂಟೆ 10.00 ಕ್ಕೆ ಗೊನೆ ಕಡಿಯಲಾಗುವುದು.ಫೆ.13 ರಂದು ಬೆಳಿಗ್ಗೆ ಗಂಟೆ 9.30 ಕ್ಕೆ ಉಗ್ರಾಣ ಮುಹೂರ್ತ,ಸಂಜೆ ಗಂಟೆ 5.30 ಕ್ಕೆ ತಂತ್ರಿಗಳ ಆಗಮನ,ಸ್ವಾಗತ,ಪ್ರಾರ್ಥನೆ,ದೀಪಾರಾಧನೆ ನಡೆಯಲಿದೆ.ರಾತ್ರಿ 7.00 ಕ್ಕೆ ಧ್ವಜಾರೋಹಣ,ಬಯನ ಬಲಿ,ರಾತ್ರಿ ಪೂಜೆ,ನೃತ್ಯಬಲಿ ನಡೆಯಲಿದೆ.

ಫೆ.14 ರಂದು ಬೆಳಿಗ್ಗೆ ಗಂಟೆ 7.00 ಕ್ಕೆ ಗಣಪತಿ ಹವನ,ಉಷಾಃಪೂಜೆ ,ಬೆಳಿಗ್ಗೆ 8.00 ಕ್ಕೆ ಶಿವೇಲಿ,ನವಕ ಕಲಶಾಭಿಷೇಕ ,ಮಧ್ಯಾಹ್ನ 12.00 ಕ್ಕೆ ಮಹಾಪೂಜೆ,ಶಿವೇಲಿ,ಅನ್ನಪ್ರಸಾದ ನಡೆಯಲಿದೆ.ರಾತ್ರಿ 7.30 ಕ್ಕೆ ಶಿವೇಲಿ, ದರ್ಶನ ಬಲಿ,ಮಹಾಪೂಜೆ,ಪ್ರಸಾದ ವಿತರಣೆ ನಡೆಯಲಿದೆ.

ಫೆ.15 ರಂದು ಬೆಳಿಗ್ಗೆ ಗಂಟೆ 7.00 ಕ್ಕೆ ಗಣಪತಿ ಹವನ,ಉಷಾಃಪೂಜೆ ನಡೆಯಲಿದೆ.8.00 ಕ್ಕೆ ಶಿವೇಲಿ,ನವಕ ಕಲಶಾಭಿಷೇಕ ಮಧ್ಯಾಹ್ನ 12.00 ಕ್ಕೆ ಮಹಾಪೂಜೆ,ಶಿವೇಲಿ,ಅನ್ನಪ್ರಸಾದ ನಡೆಯಲಿದೆ,ರಾತ್ರಿ ಗಂಟೆ 7.00 ಕ್ಕೆ ರಾತ್ರಿ ಪೂಜೆ,7.30 ಕ್ಕೆ ನೃತ್ಯ ಬಲಿ ನಡೆಯಲಿದೆ.

ಫೆ.16 ರಂದು ಬೆಳಿಗ್ಗೆ ಗಂಟೆ 7.00 ಕ್ಕೆ ಗಣಪತಿ ಹವನ,ಉಷಾಃಪೂಜೆ,ಶಿವೇಲಿ,ನವಕ ಕಲಶಾಭಿಷೇಕಮಧ್ಯಾಹ್ನ 12.00 ಕ್ಕೆ ಮಹಾಪೂಜೆ,ಶಿವೇಲಿ,ಅನ್ನಪ್ರಸಾದ ನಡೆಯಲಿದೆ.ಸಂಜೆ 5.00 ಕ್ಕೆ ಶ್ರೀ ಭೂತಬಲಿ,ಸೇವೆಸುತ್ತು, ಪೇಟೆ ಸವಾರಿ, ಸಿಡಿಮದ್ದು ಪ್ರದರ್ಶನ ನಡೆಯಲಿದೆ.ರಾತ್ರಿ 9.00 ಕ್ಕೆ ರಾತ್ರಿ ಪೂಜೆ,ರಾತ್ರಿ ಗಂಟೆ 10.00 ಕ್ಕೆ ಶಯನ,ಕವಾಟಬಂಧನ ನಡೆಯಲಿದೆ.

ಫೆ.17 ರಂದು ಬೆಳಿಗ್ಗೆ ಗಂಟೆ 7.00 ಕ್ಕೆ ಕವಾಟೋದ್ಘಾಟನೆ, ತೈಲಾಭ್ಯಂಜನ,ಉಷಾಃಪೂಜೆ,ಆರಾಟುಬಲಿ,ನಂತರ ಅವಭೃತ ಸ್ನಾನ ,ದರ್ಶನ ಬಲಿ ನಡೆಯಲಿದೆ.ಮಧ್ಯಾಹ್ನ 11.30 ಕ್ಕೆ ರಾಜಾಂಗಣ ಪ್ರಸಾದ,ಬಟ್ಟಲುಕಾಣಿಕೆ,ಧ್ವಜ ಅವರೋಹಣ ,ಸಂಪ್ರೋಕ್ಷಣೆ,ಮಹಾಪೂಜೆ,ಮಂತ್ರಾಕ್ಷತೆ,ಅನ್ನಪ್ರಸಾದ ನಡೆಯಲಿದೆ.ರಾತ್ರಿ 7.30 ಕ್ಕೆ ಅಗ್ನಿಗುಳಿಗ ದೈವದ ಭಂಡಾರ ತೆಗೆಯುವುದು,ಭೂತಕೋಲ,ಬಟ್ಟಲುಕಾಣಿಕೆ ನಡೆಯಲಿದೆ.ನಡೆಯಲಿದೆ ಎಂದು ಆಡಳಿತಾಧಿಕಾರಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here