ಸುಬ್ರಹ್ಮಣ್ಯ ಗ್ರಾಮ ಸಭೆ,

0

ಸುಬ್ರಹ್ಮಣ್ಯ ಪೇಟೆಯನ್ನು ಬಯಲು ಮುಕ್ತ ಶೌಚ ಮಾಡಲು ಆಗ್ರಹ*

ಹುಚ್ಚು ನಾಯಿ ಹಾವಳಿ, ಗೋವುಗಳ ಸಾಗಾಟಕ್ಕೆ ಕ್ರಮ

ದೇವಸ್ಥಾನದ ತೆರಿಗೆ ಬಾಕಿ ಬಗ್ಗೆ ವ್ಯಾಪಕ ಚರ್ಚೆ

ಸುಬ್ರಹ್ಮಣ್ಯ ಗ್ರಾ.ಪಂ ದ್ವಿತೀಯ ಹಂತದ ಗ್ರಾಮ ಸಭೆ ಇಂದು ಕುಮಾಧಾರ ಸಭಾಂಗಣದಲ್ಲಿ ನಡೆಯಿತು. ಸುಬ್ರಹ್ಮಣ್ಯದಲ್ಲಿ ಬಯಲು ಮುಕ್ತ ಶೌಚಾಲಯ ವ್ಯವಸ್ಥೆ ಇದ್ದರೂ ಸಾರ್ವಜನಿಕರು ರಸ್ತೆ ಬದಿ ಮಲ ಮೂತ್ರ ಮಾಡುವುದು, ಹುಚ್ಚು ನಾಯಿ ಮತ್ತು ಬೀದಿ ನಾಯಿ ಹಾವಳಿ ಬಗ್ಗೆ, ಗೋವುಗಳ ಸಾಗಾಟಕ್ಕೆ ವ್ಯವಸ್ಥೆ ಇಲ್ಲದೆ ಬಗ್ಗೆ, ದೇವಸ್ಥಾನದ ತೆರಿಗೆ ಬಾಕಿ ಇರುವ ಬಗ್ಗೆ, ವ್ಯಾಪಕ ಚರ್ಚೆ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷೆ ಲಲಿತಾ ಗುಂಡಡ್ಕ ವಹಿಸಿದ್ದರು. ನೋಡೆಲ್ ಅಧಿಕಾರಿಯಾಗಿ ಕಡಬ ತಾ.ಪಂ ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ ಕೆ ವಹಿಸಿದ್ದರು.

ವೇದಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಸವಿತಾ ಭಟ್, ಗ್ರಾ.ಪಂ ಸದಸ್ಯರುಗಳಾದ ವೆಂಕಟೇಶ್ ಎಚ್ ಎಲ್, ಮೋಹನ ಗೌಡ ಕೋಟಿಗೌಡನ ಮನೆ, ಶ್ರೀಮತಿ ಭಾರತಿ ದಿನೇಶ್, ರಾಜೇಶ್‌ ಎನ್ ಎಸ್, ಶಿವರಾಮ ನೆಕ್ರಾಜೆ, ಶ್ರೀಮತಿ ಭವ್ಯ ಕುಮಾರಿ, ರಾಜೇಶ್‌ ಕುದುರೆಮಜಲು, ಗಿರೀಶ್ ಪೈಲಾಜೆ, ಹರೀಶ್ ಇಂಜಾಡಿ, ಶ್ರೀಮತಿ ಮಲ್ಲಿಕಾ, ಶ್ರೀಮತಿ ದಿವ್ಯ, ಶ್ರೀಮತಿ ಸೌಮ್ಯ, ಶ್ರೀಮತಿ ಪುಷ್ಪಲತಾ, ಶ್ರೀಮತಿ ಜಯಂತಿ, ಶ್ರೀಮತಿ ಶಶಿಕಲಾ, ದಿಲೀಪ್ ಉಪ್ಪಳಿಕೆ, ಶ್ರೀಮತಿ ಸುಜಾತ, ಶ್ರೀಮತಿ ಪುಷ್ಪಲತಾ, ಪಿ.ಡಿ.ಒ ಆಕಾಶ್ ಕೆ, ಕಾರ್ಯದರ್ಶಿ ಮೋನಪ್ಪ ಡಿ ಉಪಸ್ಥಿತರಿದ್ದರು.

ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ಒದಗಿಸಿದರು. ಪಿ.ಡಿ.ಒ ಆಕಾಶ್ ಪ್ರಸ್ತಾವಿಕ ಮಾತನಾಡಿದರು. ಮೋನಪ್ಪ ಅವರು ಸ್ವಾಗತಿಸಿ, ಗ್ರಾ.ಪಂ ಸದಸ್ಯ ಗಿರೀಶ್ ಆಚಾರ್ಯ ವಂದಿಸಿದರು.