ಕಾಯರ್ತೋಡಿ ಶ್ರೀ ದೇವರ ಬ್ರಹ್ಮಕಲಶೋತ್ಸವ : ಧಾರ್ಮಿಕ ಕಾರ್ಯಕ್ರಮ, ಇಂದು ರಾತ್ರಿ ಅನುಜ್ಞಾಬಲಿ

0

ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವರ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಜಾತ್ರೋತ್ಸವ ನಡೆಯುತ್ತಿದ್ದು, ನಿನ್ನೆ ರಾತ್ರಿ ದೇಲಂಪಾಡಿ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಮಕ್ಕಳ ತಂಡದಿಂದ ಸುದರ್ಶನ ಗರ್ವಭಂಗ ಯಕ್ಷಗಾನ ನಡೆಯಿತು.

ಇಂದು ಬೆಳಿಗ್ಗೆ ಗಣಪತಿ ಹವನದ ಬಳಿಕ ತತ್ತ್ವಕಲಶ, ತತ್ತ್ವ ಹೋಮ ನಡೆದು ಅನುಜ್ಞಾಕಲಶಾಭಿಷೇಕ ನಡೆಯಿತು. ಈ ಸಂದರ್ಭದಲ್ಲಿ ದೇವಳದ ಎಲ್ಲಾ ಸಮಿತಿಯ ಪದಾಧಿಕಾರಿಗಳು, ಭಕ್ತರು ಉಪಸ್ಥಿತರಿದ್ದರು.
ಇಂದು ರಾತ್ರಿ ೬ ರಿಂದ ಅನುಜ್ಞಾಬಲಿ ಬಳಿಕ ಕ್ಷೇತ್ರಪಾಲನಲ್ಲಿ ಅನುಜ್ಞಾಪ್ರಾರ್ಥನೆ, ಅಂಕುರಪೂಜೆ, ತ್ರಿಕಾಲ ಪೂಜೆ ನಡೆದು ಬಿಂಬಶುದ್ಧಿ ಕಲಶಪೂಜೆ ಹಾಗೂ ಮಹಾಪೂಜೆ ನಡೆಯಲಿದೆ.


ರಾತ್ರಿ ರಾಷ್ಟ್ರದೇವೋಭವ ಖ್ಯಾತಿಯ ಮಂಗಳೂರಿನ ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳಿಂದ ರಾಷ್ಟ್ರ ಮತ್ತು ಧರ್ಮ ಜಾಗೃತಿಯ ಪುಣ್ಯಭೂಮಿ ಭಾರತ ನೃತ್ಯ ವೈವಿಧ್ಯ ನಡೆಯಲಿದೆ.