ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ, ದೈವಗಳ ನೇಮೋತ್ಸವ ಸಂಪನ್ನ

0

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ಹಾಗೂ ದೈವಗಳ ನೇಮೋತ್ಸವವು ಫೆ.01 ಮತ್ತು ಫೆ. 2 ರಂದು ಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಗಳವರ ನೇತೃತ್ವದಲ್ಲಿ ನಡೆಯಿತು.


ಫೆ .1 ರಂದು ಬೆಳಿಗ್ಗೆ ಗಣಪತಿ ಹೋಮ, ಏಕಾದಶ ರುದ್ರಾಭಿಷೇಕ, ಮಧ್ಯಾಹ್ನ ನವ ಕಲಾಶಾಭಿಷೇಕ, ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆದಿದ್ದು ಸಂಜೆ ದೈವಗಳ ಭಂಡಾರ ತೆಗೆಯಲಾಯಿತು.

ರಾತ್ರಿ ಚೆಂಡೆವಾದನ, ಮಹಾಪೂಜೆ ಬಳಿಕ ರಾತ್ರಿ ದೇವರ ಉತ್ಸವ ಬಲಿ ಹೊರಟು, ವಸಂತಕಟ್ಟೆ ಪೂಜೆ ನಡೆದು, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಿತು.

ಫೆ.2 ರ ಬೆಳಗ್ಗೆಗಿನ ಜಾವ ಉಳ್ಳಾಕ್ಲು ಉಳ್ಳಾಲ್ತಿ ನೇಮ ನಡೆದು ಬಳಿಕ ಕುಮಾರ ದೈವದ ನೇಮ ನಡೆಯಿತು. ಶ್ರೀ ದೇವರಿಗೆ ಪೂಜೆ ಬಳಿಕ ರಕ್ತೇಶ್ವರಿ ದೈವದ ನೇಮ, ಧೂಮಾವತಿ ದೈವದ ನೇಮ ನಡೆದು ಮಧ್ಯಾಹ್ನ ಗಮಹಾಪೂಜೆ, ದೈವಗಳ ಪ್ರಸಾದ ವಿತರಣೆ ನಡೆದು ಬಳಿಕ ಅನ್ನಸಂತರ್ಪಣೆ ನಡೆಯಿತು.

ಸಂಜೆ ಗುಳಿಗ ಕೋಲ ನಡೆದು ಪ್ರಸಾದ ವಿತರಣೆ ನಡೆಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಕೆ ಬೆಳ್ಯಪ್ಪ ಕಡ್ತಲ್ ಕಜೆ, ಸದಸ್ಯರುಗಳಾದ ಡಿ.ಎಂ ರಾಮಣ್ಣ ಗೌಡ, ಕರುಣಾಕರ ಪಾರೆಪ್ಪಾಡಿ, ಪದ್ಮನಾಭ ದಂಬೆಕೋಡಿ, ಶ್ರೀಮತಿ ಪುಷ್ಪಾವತಿ ಮೊಟ್ಟೆಮನೆ, ಲಿಂಗಪ್ಪ ನಾಯ್ಕ ಕಾಜಿಮಡ್ಕ, ಶ್ರೀಮತಿ ಸುಧಾ ಜಯಪ್ರಕಾಶ್ ಚಳ್ಳ, ಕುಶಾಲಪ್ಪ ಗೌಡ ಪಾರೆಪ್ಪಾಡಿ, ಪರಮೇಶ್ವರ ಭಟ್ , ವಿವಿಧ ಸಮಿತಿಯ ಪದಾಧಿಕಾರಿಗಳು,ಸದಸ್ಯರು ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದರು.

LEAVE A REPLY

Please enter your comment!
Please enter your name here