ಆಲೆಟ್ಟಿ: ಗುಂಡ್ಯ ಮಾಡಾರಮನೆಯಲ್ಲಿ ಇಂದು ಉಳ್ಳಾಕುಲು ದೈವದ ನೇಮೋತ್ಸವ

0

ಆಲೆಟ್ಟಿಗುಂಡ್ಯ ಮಾಡಾರಮನೆ ಶ್ರೀ ಉಳ್ಳಾಕುಲು ಸಪರಿವಾರ ದೈವಸ್ಥಾನದಲ್ಲಿ ಇಂದು ರಾತ್ರಿ ಶ್ರೀ ಉಳ್ಳಾಕುಲು ದೈವದ ಕಿರಿಯರ ಮತ್ತು ಹಿರಿಯರ ನೇಮ ನಡೆದು ನಾಳೆ ಬೆಳಗ್ಗೆ ಸಪರಿವಾರ ದೈವಗಳ ನೇಮೋತ್ಸವವು ಸಂಜೆಯ ತನಕ ನಡೆಯಲಿರುವುದು.

ಫೆ.2 ರಂದು ರಾತ್ರಿ ಶ್ರೀ ಸದಾಶಿವ ಭಜನಾ ಸಂಘದ ಸದಸ್ಯರಿಂದ ಭಜನಾ ಸೇವೆ ನಡೆಯಿತು. ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್ ಪ್ರಭು ರವರು ಪ್ರಾರ್ಥಿಸಿದರು. ಸಮಿತಿ ಸದಸ್ಯರು ಹಾಗೂ ನಾಲ್ಕು ಸ್ಥಾನಿಕ ಮನೆಯವರು ಉಪಸ್ಥಿತರಿದ್ದರು.