ಪಂಜ ದೇವಳದಲ್ಲಿ ‘ಲಿಂಗ ಸ್ವರೂಪಿ ‘ ಕನ್ನಡ ಭಕ್ತಿಗೀತೆ ಬಿಡುಗಡೆ

0

ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದಲ್ಲಿ ‘ಲಿಂಗ ಸ್ವರೂಪಿ’ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರ ಕನ್ನಡ ಭಕ್ತಿಗೀತೆ ಬಿಡುಗಡೆ ಕಾರ್ಯಕ್ರಮ ಫೆ.3 ರಂದು ನಡೆಯಿತು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ರೈ ಅಗೋಳಿಬೈಲುಗುತ್ತು ರವರು ಬಿಡುಗಡೆ ಗೊಳಿಸಿದರು.ವ್ಯವಸ್ಥಾಪನಾ ಸಮಿತಿ ಸದಸ್ಯ ಶಂಕರ ಕುಮಾರ್,ಭಕ್ತಿ ಗೀತೆಯ ಗಾಯಕಿ ಸುಮಾ ಕೋಟೆ ಪಂಜ, ಸಾಹಿತಿ ಪಂಚವರ್ಣ ಖ್ಯಾತಿಯ ರಕ್ಷಿತ್ ಮಂಚಿಕಟ್ಟೆ,
ಛಾಯಾಗ್ರಹಣ ಮಾಡಿದ ಪ್ರಸಾದ್ ಕ್ರಿಯೇಷನ್ ಕೃಷ್ಣಪ್ರಸಾದ್ ಬಳ್ಪ,ಸಹಕರಿಸಿದ ಸುಧೀರ್ ನೇರಳ ,ದಿನೇಶ್ ಅರಂಬೂರು ಹಾಗೂ ಮಹೇಶ್ ಕೋಟೆ, ಶ್ರೀಮತಿ ‌ಸುವರ್ಣ ಎಂ ಕೋಟೆ ಮೊದಲಾದವರು ಉಪಸ್ಥಿತರಿದ್ದರು. ಶೈನ್ ಸ್ಟುಡಿಯೋ ಕನ್ಯಾನ ಸಂಕಲನದಲ್ಲಿ,ಕಬಕ ಶ್ರೀರಾಜ್ ಮ್ಯೂಸಿಕಲ್ ವಲ್ಡ್ ಮಿಥುನ್ ರಾಜ್ ವಿದ್ಯಾಪುರ ಸಂಗೀತ ನಿರ್ದೇಶಿಸಿದ್ದಾರೆ.


ಆ ಪ್ರಯುಕ್ತ ಮುಂಜಾನೆ ದೇವಳದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.ಅರ್ಚಕ ರಾಮಚಂದ್ರ ಭಟ್ ಪ್ರಾರ್ಥಿಸಿದರು.
.

LEAVE A REPLY

Please enter your comment!
Please enter your name here