ಪಂಜ ಜಾತ್ರೆಗೆ : ಹಸಿರು ಕಾಣಿಕೆ ಸಮರ್ಪಣೆ
ಪುತ್ಯ ಕಟ್ಟೆಯಿಂದ ವೈಭವದ ಮೆರವಣಿಗೆ

0

ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ವರ್ಷಾವಧಿ ಜಾತ್ರಾ ಮಹೋತ್ಸವ ಆರಂಭಗೊಂಡಿದ್ದು ಫೆ.3.ರಂದು
ಸಂಜೆ ವೈಭವದ ಹಸಿರು ಕಾಣಿಕೆ ಮೆರವಣಿಗೆ ಪುತ್ಯ ಕಟ್ಟೆ(ಸತ್ಯಕಟ್ಟೆ)ಯಿಂದ ಆರಂಭ ಗೊಂಡು ದೇವಳಕ್ಕೆ ಸಮರ್ಪಣೆ ಗೊಂಡಿತು.


ದೈವ ಮಧ್ಯಸ್ಥ ತಿಮ್ಮಪ್ಪ ಗೌಡ ಪುತ್ಯರವರು ಪ್ರಾರ್ಥಿಸಿ ಬಳಿಕ ತೆಂಗಿನ ಕಾಯಿ ಒಡೆದು ಮೆರವಣಿಗೆ ಜರುಗಿತು. ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪದ್ಮನಾಭ ರೈ ಅಗೋಳಿ ಬೈಲುಗುತ್ತು, ವ್ಯವಸ್ಥಾಪನಾ ಸಮಿತಿ ಸದಸ್ಯರು ,ಮಾಜಿ ಆಡಳಿತಾಧಿಕಾರಿ ದೇವಿಪ್ರಸಾದ್ ಕಾನತ್ತೂರ್,‌ವಿವಿಧ ಸಮಿತಿಗಳ ಸಂಚಾಲಕರು,ಸದಸ್ಯರು ಹಾಗೂ ಸೀಮೆಯ ನೂರಾರು ಭಕ್ತರು ಪಾಲ್ಗೊಂಡಿದ್ದರು.

ಹಸಿರು ಕಾಣಿಕೆ ವಾಹನದೊಂದಿಗೆ ಚೆಂಡೆ , ಬ್ಯಾಂಡ್ ವಾಲಗ, ಸಮವಸ್ತ್ರ ಧರಿಸಿ ಭಗವಾಧ್ವಜ ಹಿಡಿದ ಹಿಂದೂ ಜಾಗರಣ ವೇದಿಕೆ ಸದಸ್ಯರು,ಸಾಲಾಗಿ ಸಾಗಿದ ನೂರಾರು ವಾಹನಗಳು ಮೆರವಣಿಗೆಗೆ ಮೆರುಗು ನೀಡಿತ್ತು. ಫೆ.3.ರಂದು ಸಂಜೆ ದಂಡಮಾಲೆ ಹಾಕಿ ಬಲಿ , ಬೇತಾಳ ಗಳು ಇಳಿಯುವುದು.ಫೆ.4. ರಂದು ಶ್ರೀ ದೇವರ ಉತ್ಸವ, ಮಹಾ ಪೂಜೆ.ಫೆ.5 ರಂದು ಹಗಲು ಶ್ರೀ ದೇವರ ದರ್ಶನ ಬಲಿ.ಫೆ.6.ರಂದು ರಾತ್ರಿ ಶ್ರೀದೇವರ ಬ್ರಹ್ಮ ರಥೋತ್ಸವ ಜರುಗಲಿದೆ.