ಪಂಜ:ಜಾತ್ರೋತ್ಸವ-ದಂಡಮಾಲೆ ಹಾಕಿ ಶ್ರೀ ದೇವರ ಬಲಿ

0

ಫೆ.5:ದರ್ಶನ ಬಲಿ- ಫೆ.6:ಬ್ರಹ್ಮರಥೋತ್ಸವ

ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯದ ವರ್ಷಾವಧಿ ಜಾತ್ರೋತ್ಸವವು
ಫೆ.1 ರಂದು ರಾತ್ರಿ ಧ್ವಜಾರೋಹಣ ನಡೆದು ಆರಂಭ ಗೊಂಡಿದ್ದು ,
ಫೆ.2 ರಂದು ಮಹಾ ಪೂಜೆ, ನಿತ್ಯಬಲಿ.ಫೆ.3.ರಂದು ಮಹಾಪೂಜೆ , ನಿತ್ಯಬಲಿ ಸಂಜೆ ಹಸಿರು ಕಾಣಿಕೆ ಮೆರವಣಿಗೆ ಪುತ್ಯ ಕಟ್ಟೆಯಿಂದ ಆರಂಭ ಗೊಂಡು ದೇವಳಕ್ಕೆ ಸಮರ್ಪಣೆ ಗೊಂಡಿತು.

ರಾತ್ರಿ
ದಂಡಮಾಲೆ ಹಾಕಿ ಬಲಿ , ಬೇತಾಳಗಳು ಇಳಿಯುವುದು ನಡೆಯಿತು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ರೈ ಅಗೋಳಿಬೈಲುಗುತ್ತು, ವ್ಯವಸ್ಥಾಪನಾ ಸಮಿತಿ ಸದಸ್ಯರು, ಉತ್ಸವ ಸಮಿತಿಯ ಸಂಚಾಲಕರು, ಸದಸ್ಯರು, ಸೀಮೆಯ ಭಕ್ತಾದಿಗಳು ಪಾಲ್ಗೊಂಡಿದ್ದರು.


ಫೆ4. ರಂದು ಶ್ರೀ ದೇವರ ಉತ್ಸವ, ಮಹಾ ಪೂಜೆ.ಫೆ.5 ರಂದು ಹಗಲು ಶ್ರೀ ದೇವರ ದರ್ಶನ ಬಲಿ.ಫೆ.6.ರಂದು ರಾತ್ರಿ ಶ್ರೀ ದೇವರ ಬ್ರಹ್ಮರಥೋತ್ಸವವು ಜರುಗಲಿದೆ.


ಸಾಂಸ್ಕೃತಿಕ ಕಾರ್ಯಕ್ರಮಗಳು:
ಫೆ.4 ರಂದು ರಾತ್ರಿ ಗಂಟೆ 9 ರಿಂದ ಡಾನ್ಸ್ & ಬೀಟ್ಸ್ ಪಂಜ ಮತ್ತು ಬೆಳ್ಳಾರೆ ಇದರ ವಿದ್ಯಾರ್ಥಿಗಳಿಂದ ನೃತ್ಯ ವೈಭವ.ಫೆ.5ರಂದು ಸಂಜೆ ಗಂಟೆ 7 ರಿಂದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ಧರ್ಮಸ್ಥಳ ಇವರಿಂದ ಯಕ್ಷಗಾನ ಬಯಲಾಟ.ಫೆ.6 ರಂದು ಸಂಜೆ ಗಂಟೆ 5 ರಿಂದ ಶಾರದಾಂಬಾ ಯಕ್ಷಗಾನ ಅಧ್ಯಯನ ಕೇಂದ್ರ ಕಲಾ ಕ್ಷೇತ್ರ ಪಂಜ ಇದರ ವಿದ್ಯಾರ್ಥಿಗಳಿಂದ
‘ಶಿವಲೀಲೆ’ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.