ಪಂಜ ಜಾತ್ರೆ: ಶ್ರೀ ದೇವರ ದರ್ಶನ ಬಲಿ, ಫೆ.6. :ಶ್ರೀದೇವರ ಬ್ರಹ್ಮರಥೋತ್ಸವ

0

ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯದ ವರ್ಷಾವಧಿ ಜಾತ್ರೋತ್ಸವವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿ ಯವರ ಹಿರಿತನದಲ್ಲಿ ನಡೆಯುತ್ತಿದು, ಫೆ.5 ರಂದು ಹಗಲು ಶ್ರೀ ದೇವರ ದರ್ಶನ ಬಲಿ . ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ದರ್ಶನ ಉತ್ಸವ ಕೆಬ್ಲಾಡಿಯ ರಾಜ ಹೆಸರಿನ ಗೂಳಿ , ಬೇತಾಳಗಳು, ಬ್ಯಾಂಡ್ ವಾಲಗ, ಕೇರಳದ ಚೆಂಡೆತಂಡ , ಭಜನೆ ತಂಡ, ವೇದ ಮಂತ್ರ ಘೋಷ ಇತ್ತು. ಉತ್ಸವದಲ್ಲಿದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪದ್ಮನಾಭ ರೈ ಅಗೋಳಿ ಬೈಲುಗುತ್ತು , ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಾಲಕೃಷ್ಣ ಗೌಡ ಕುದ್ವ, ನಾರಾಯಣ ಗೌಡ ಕೋರ್ಜೆ, ದಿನೇಶ್ ಗರಡಿ,ಶಂಕರ್ ಕುಮಾರ್, ಲಕ್ಷ್ಮಣ ಗೌಡ ಆಕ್ರಿಕಟ್ಟೆ, ರಾಮಚಂದ್ರ ಭಟ್, ಶ್ರೀಮತಿ ಸೌಮ್ಯ ಪಿ ಆರ್, ಶ್ರೀಮತಿ ರೋಹಿಣಿ ಆರ್ನೋಜಿ , ಸಲಹಾ ಸಮಿತಿಯ ಡಾ.ರಾಮಯ್ಯ ಭಟ್ , ಚಂದ್ರಶೇಖರ ಶಾಸ್ತ್ರಿ ಸಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇರಾಜೆ, ದೇವಳದ ಮಾಜಿ ಆಡಳಿತಾಧಿಕಾರಿ ಡಾ.ದೇವಿಪ್ರಸಾದ್ ಕಾನತ್ತೂರ್ , ,‌ಧಾರ್ಮಿಕ ಪರಿಷತ್ ಸದಸ್ಯ ರಘುನಾಥ ರೈ,
ದೈವದ ಮಧ್ಯಸ್ಥ ತಿಮ್ಮಪ್ಪ ಗೌಡ ಪುತ್ಯ,ಉತ್ಸವ ಸಮಿತಿ ಸಂಚಾಲಕರು, ಸದಸ್ಯರು,ಸೀಮೆಯ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.ವಿವಿಧ ಸಂಘ ಸಂಸ್ಥೆಯವರು, ಭಕ್ತರು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.


ರಾತ್ರಿ ದೀಪೋತ್ಸವ,ಶ್ರೀ ದೇವರ ಬಲಿ ಹೊರಟು ವಸಂತ ಕಟ್ಟೆ ಪೂಜೆ. ದೈವಗಳ ನರ್ತನ ಸೇವೆ,ಉತ್ಸವ, ಅನ್ನಸಂತರ್ಪಣೆ ನಡೆಯಲಿದೆ.
ಫೆ.6: ಬ್ರಹ್ಮರಥೋತ್ಸವ:
ಫೆ.6 ರಂದು ಬೆಳಿಗ್ಗೆ ಶ್ರೀದೇವರ ಬಲಿ ಹೊರಟು ಉತ್ಸವ ,ಮಧ್ಯಾಹ್ನ ಮಹಾಪೂಜೆ, ರಾತ್ರಿ ಗಂಟೆ 9.30ರಿಂದ ಶ್ರೀ ದೇವರ ಬ್ರಹ್ಮರಥೋತ್ಸವ , ಕಾಚುಕುಜುಂಬ ದೈವದ ನರ್ತನ ಸೇವೆ, ಮಹಾಪೂಜೆ, ಶ್ರೀ ಭೂತ ಬಲಿ,ಶಯನೋತ್ಸವ ,ಕವಾಟ ಬಂಧನ ಜರುಗಲಿದೆ.
ಫೆ.7.ರಂದು ಕವಾಟೋದ್ಜಾಟನೆ ದೇವರಿಗೆ ಅಭಿಷೇಕ ಬೆಳಿಗ್ಗೆ ಗಂಟೆ 9ರಿಂದ ಬಲಿ ಹೊರಟು ಅವಭೃತ ಸ್ನಾನ ,ಧ್ವಜಾವರೋಹಣ , ಮಹಾಪೂಜೆ ಜರುಗಲಿದೆ.ಸಂಜೆ ದೇಗುಲದಿಂದ ಶ್ರೀ ಕಾಚುಕುಜುಂಬ, ಉಳ್ಳಾಕುಲು ದೈವಗಳ ಭಂಡಾರ ವನ್ನು ಮೆರವಣಿಗೆ ಮೂಲಕ ಮೂಲಸ್ಥಾನ ಗರಡಿ ಬೈಲಿಗೆ ಹೋಗಿ ಧ್ವಜಾರೋಹಣ , ಶ್ರೀ ಕಾಚುಕುಜುಂಬ ದೈವದ ನೇಮ ನಡೆಯಲಿದೆ.
ಫೆ.8 ರಂದು ಮುಂಜಾನೆ ಗಂಟೆ 6.30 ರಿಂದ ಗರಡಿ ಬೈಲಿನ ಮೂಲ ನಾಗನ ಕಟ್ಟೆಯಲ್ಲಿ ತಂಬಿಲ ಹಾಗೂ ಶ್ರೀ ಉಳ್ಳಾಕುಲು ದೈವದ ನೇಮ ,ಪ್ರಸಾದ ವಿತರಣೆ , ಧ್ವಜಾವರೋಹಣ, ಶ್ರೀ ದೇವಳದಲ್ಲಿ ಸಂಪ್ರೋಕ್ಷಣೆ ,ಮಹಾಪೂಜೆ ವೈದಿಕ ಮಂತ್ರಾಕ್ಷತೆ ಪ್ರಸಾದ ವಿತರಣೆ ಜರುಗಲಿದೆ. ರಾತ್ರಿ ಶಿರಾಡಿ ದೈವದ ಭಂಡಾರ ಬರುವುದು.ಫೆ.9.ರಂದು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಪೂಜೆ ಹಾಗೂ ಶಿರಾಡಿ ದೈವದ ನೇಮ ಜರುಗಲಿದೆ.

ವೈಭವದ ಹಸಿರು ಕಾಣಿಕೆ ಮೆರವಣಿಗೆ:
ಫೆ.3.ರಂದು ಸಂಜೆ ವೈಭವದ ಹಸಿರು ಕಾಣಿಕೆ ಮೆರವಣಿಗೆ ಪುತ್ಯ ಕಟ್ಟೆ(ಸತ್ಯಕಟ್ಟೆ)ಯಿಂದ ಆರಂಭ ಗೊಂಡು ದೇವಳಕ್ಕೆ ಸಮರ್ಪಣೆ ಗೊಂಡಿತು.
ದೈವ ಮಧ್ಯಸ್ಥ ತಿಮ್ಮಪ್ಪ ಗೌಡ ಪುತ್ಯರವರು ಪ್ರಾರ್ಥಿಸಿ ಬಳಿಕ ತೆಂಗಿನ ಕಾಯಿ ಒಡೆದು ಮೆರವಣಿಗೆ ಜರುಗಿತು.ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪದ್ಮನಾಭ ರೈ ಅಗೋಳಿ ಬೈಲುಗುತ್ತು, ವ್ಯವಸ್ಥಾಪನಾ ಸಮಿತಿ ಸದಸ್ಯರು ,ಮಾಜಿ ಆಡಳಿತಾಧಿಕಾರಿ ದೇವಿಪ್ರಸಾದ್ ಕಾನತ್ತೂರ್ ,ವಿವಿಧ ಸಮಿತಿಗಳ ಸಂಚಾಲಕರು,ಸದಸ್ಯರು ಹಾಗೂ ಸೀಮೆಯ ನೂರಾರು ಭಕ್ತರು ಪಾಲ್ಗೊಂಡಿದ್ದರು. ಹಸಿರು ಕಾಣಿಕೆ ವಾಹನದೊಂದಿಗೆ ಚೆಂಡೆ , ಬ್ಯಾಂಡ್ ವಾಲಗ, ಸಮವಸ್ತ್ರ ಧರಿಸಿ ಭಗವಾಧ್ವಜ ಹಿಡಿದ
ಹಿಂದೂ ಜಾಗರಣ ವೇದಿಕೆ ಸದಸ್ಯರು,ಸಾಲಾಗಿ ಸಾಗಿದ ನೂರಾರು ವಾಹನಗಳು ಮೆರವಣಿಗೆಗೆ ಮೆರುಗು ನೀಡಿತ್ತು. ಸಂಜೆ ದಂಡಮಾಲೆ ಹಾಕಿ ಬಲಿ , ಬೇತಾಳಗಳು ಇಳಿದು ಉತ್ಸವ ನಡೆಯಿತು. ಫೆ.1 ರಂದು ರಾತ್ರಿ ಧ್ವಜಾರೋಹಣ.ಫೆ.2.ರಂದು ಮಹಾಪೂಜೆ, ನಿತ್ಯ ಬಲಿ ಜರುಗಿತು.