ಬೆಳ್ಳಾರೆಯಲ್ಲಿ ಕಾಂಗ್ರೆಸ್ ಕರಾವಳಿ ಪ್ರಜಾಧ್ವನಿ ಯಾತ್ರೆ ಸಾರ್ವಜನಿಕ ಸಭೆ

0

ಬಿಜೆಪಿ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ : ಬಿ.ಕೆ.ಹರಿಪ್ರಸಾದ್

ಬಿಜೆಪಿ ಸರಕಾರಕ್ಕೆ ಜನಸಾಮಾನ್ಯರ ಬಗ್ಗೆ ಕಾಳಜಿ ಇಲ್ಲ.ಯಾವುದೇ ಕ್ಣೇತ್ರದಲ್ಲಿ ಅಭಿವೃದ್ದಿ ಮಾಡಿಲ್ಲ.ಜನರಿಗೆ ಉದ್ಯೋಗವಕಾಶ ನೀಡುತ್ತಿಲ್ಲ.ಕಾರ್ಮಿಕರ ಹಕ್ಕುಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ.ಕೇವಲ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದರು.


ಅವರು ಬೆಳ್ಳಾರೆ ಎ.ಪಿ.ಎಂ.ಸಿ.ಪ್ರಾಂಗಣದಲ್ಲಿ ನಡೆದ ಕರಾವಳಿ ಪ್ರಜಾಧ್ವನಿ ಯಾತ್ರೆಯ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಿದ್ದರು.
ಜನರು ಶಾಂತಿ,ನೆಮ್ಮದಿಯಿಂದ ಇರಲು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸನ್ನು ಗೆಲ್ಲಿಸಬೇಕು.ತಾರತಮ್ಯ ಮಾಡುವ ಸರಕಾರವನ್ನು ಕಿತ್ತೊಗೆಯಬೇಕು .ಮಕ್ಕಳ ಭವಿಷ್ಯ ಉತ್ತಮವಾಗಬೇಕಾದರೆ ಬಿಜೆಪಿ ಆಡಳಿತದವರನ್ನು ಮನೆಗೆ ಕಳುಹಿಸಿ ಎಂದು ಅವರು ಹೇಳಿದರು.
ಮಾಜಿ ಸಚಿವ ಆರ್ . ವಿ.ದೇಶಪಾಂಡೆ ಮಾತನಾಡಿ ಯುವಶಕ್ತಿಗೆ ಉತ್ತೇಜನ ಕೊಡಬೇಕು.ಸಮಾಜದಲ್ಲಿ ಜನರು ನೆಮ್ಮದಿಯಿಂದ ಇಲ್ಲ ಈಗ ಹಲವಾರು ಸಮಸ್ಯೆಗಳಿಂದ ಜನರು ತೊಂದರೆಗೀಡಾಗಿದ್ದಾರೆ.ಬಿಜೆಪಿಯ ಪೊಳ್ಳು ಭರವಸೆಗಳು ಮಾತ್ರ.ಹಿಂದುತ್ವದ ಪ್ರಣಾಳಿಕೆ ಮಾಡಿ ಚುನಾವಣೆ ಗೆಲ್ಲುತ್ತಾರೆ.ಅಭಿವೃದ್ಧಿ ಇಲ್ಲ ಎಂದು ಹೇಳಿದರು.


ಕೆ.ಪಿ.ಸಿ.ಸಿ.ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಮಾತನಾಡಿ ಬಿಜೆಪಿ ಸರಕಾರ ಭ್ರಷ್ಟಾಚಾರ ಮಾಡಿ ನೈತಿಕತೆ ಕಳೆದುಕೊಂಡಿದ್ದಾರೆ ನಾಲ್ಕು ವರ್ಷದಲ್ಲಿ ಭರವಸೆಗಳನ್ನು ಮಾತ್ರ ನೀಡಿದ್ದಾರೆ ಎಂದು ಹೇಳಿದರು.
ವೇದಿಕೆಯಲ್ಲಿ ಮಾಜಿ ಸಚಿವ ರಮಾನಾಥ ರೈ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ,ಮಾಜಿ ಶಾಸಕ ಮಧುಬಂಗಾರಪ್ಪ, ಜಿಲ್ಲಾಧ್ಯಕ್ಷ ಕೆ.ಹರೀಶ್ ಕುಮಾರ್, ಶಾಸಕ ಯು.ಟಿ.ಖಾದರ್, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ,ಕೆ.ಪಿ.ಸಿ.ಸಿ.ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ,ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್,ಮಾಜಿ ಶಾಸಕಿ ಶಕುಂತಳಾ ಶೆಟ್ಟಿ,ಹೇಮನಾಥ ಶೆಟ್ಟಿ ಕಾವು, ಎಂ.ಎಸ್.ಮಹಮ್ಮದ್, ಕಡಬ ಬ್ಲಾಕ್ ಅಧ್ಯಕ್ಷ ಸುಧೀರ್ ಶೆಟ್ಟಿ, ಕೆಪಿಸಿಸಿ ಸಂಯೋಜಕ ಪ್ರದೀಪ್ ಕುಮಾರ್ ರೈ ಪಾಂಬಾರು, ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಪ್ರವೀಣ ರೈ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ರಾಜೀವಿ ಆರ್ ರೈ,ಸರಸ್ವತಿ ಕಾಮತ್, ಚಂದ್ರಶೇಖರ ಕಾಮತ್, ಚಂದ್ರಲಿಂಗಂ, ಟಿ.ಎಂ.ಶಹೀದ್, ಸಂಶುದ್ದೀನ್, ನಂದಕುಮಾರ್, ಕೃಷ್ಣಪ್ಪ ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ,ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷೆ ಹಾಜಿರಾ, ವಿಶ್ವನಾಥ ರೈ ಕಳಂಜ, ಶ್ಯಾಮಸುಂದರ ರೈ ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.


ಅಶೋಕ್ ಚೂಂತಾರು,ಬಶೀರ್ ನೇಲ್ಯಮಜಲು,ದಿನೇಶ್ ಮಡ್ತಿಲ ಕಾರ್ಯಕ್ರಮ ನಿರೂಪಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಬೆಳ್ಳಾರೆ ಸಹಕಾರಿ ಸಂಘದ ಅಧ್ಯಕ್ಷ ಅನಿಲ್ ರೈ ಸ್ವಾಗತಿಸಿ, ಗಫೂರ್ ಕಲ್ಮಡ್ಕ ವಂದಿಸಿದರು.

LEAVE A REPLY

Please enter your comment!
Please enter your name here