ಸುಳ್ಯದಲ್ಲಿ ತರುಣ್ಸ್ ಡ್ಯಾನ್ಸಿಂಗ್ ಯೂನಿಟ್ ನೃತ್ಯ ತರಬೇತಿ ಕೇಂದ್ರ ಉದ್ಘಾಟನೆ

0

ನೃತ್ಯ ಸಂಯೋಜಕರಾಗಿರುವ ತರುಣ್ ರಾಜ್ ಹಾಗೂ ಉದ್ಯಮಿ, ಸುಳ್ಯ ತಾಲೂಕು ಅಮಚೂರ್ ಕಬಡ್ಡಿ ಅಸೋಸಿಯೇಷನ್ ಉಪಾಧ್ಯಕ್ಷ ಶರತ್ ಅಡ್ಕಾರು ಅವರ ಮಾಲಕತ್ವದ ತರುಣ್ಸ್ ಡ್ಯಾನ್ಸಿಂಗ್ ಯೂನಿಟ್ ನೃತ್ಯ ತರಬೇತಿ ಕೇಂದ್ರವು ಸುಳ್ಯದಲ್ಲಿ ಫೆ.5ರಂದು ಉದ್ಘಾಟನೆಗೊಂಡಿತು.

ಸುಳ್ಯದ ಜ್ಯೂನಿಯರ್ ಕಾಲೇಜು ರಸ್ತೆಯ ಮಹಿಳಾ ಮಂಡಲಗಳ ಒಕ್ಕೂಟದ ಸಭಾಭವನದಲ್ಲಿ ನಡೆದ ಕಾರ್ಯಕ್ರಮವನ್ನು ದ.ಕ. ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟದ ಖಜಾಂಜಿ ಶ್ರೀಮತಿ ಚಂದ್ರಾಕ್ಷಿ ಜೆ.ರೈ ಅವರು ಉದ್ಘಾಟಿಸಿದರು. ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ತ್ರಿವೇಣಿ ದಾಮ್ಲೆ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಪೂರ್ವಾಧ್ಯಕ್ಷರುಗಳಾದ ಶ್ರೀಮತಿ ಮಹಾಲಕ್ಷ್ಮಿ ಕೊಂರ್ಬಡ್ಕ, ಶ್ರೀಮತಿ ಹರ್ಷ ಕರುಣಾಕರ, ಶ್ರೀಮತಿ ಪ್ರಸಲ್ಲ ಪಿ‌. ರೈ ಉಪಸ್ಥಿತರಿದ್ದರು.


ಸುಳ್ಯ ತಾಲೂಕು ಮಹಿಳಾ ಮಂಡಳಗಳ ಒಕ್ಕೂಟದ ಖಜಾಂಜಿ ಶ್ರೀಮತಿ ಸುನೀತಾ ರಾಮಚಂದ್ರ, ನ.ಪಂ. ಸದಸ್ಯೆ ಶ್ರೀಮತಿ ಶಿಲ್ಪಾ ಸುದೇವ್, ಮಹಿಳಾ ಮಂಡಲಗಳ ಒಕ್ಕೂಟದ ನಿರ್ದೇಶಕಿ ಶ್ರೀಮತಿ ಲಲಿತ ಬೆಟ್ಟಂಪಾಡಿ ಗೌರವ ಉಪಸ್ಥಿತರಿದ್ದರು. ಹರ್ಷಿತ್ ಮಿತ್ತಡ್ಕ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
ಪ್ರತೀ ಆದಿತ್ಯವಾರ ಅಪರಾಹ್ನ 2.30ರಿಂದ ಸಂಜೆ 5.30ರವರೆಗೆ ನೃತ್ಯ ತರಬೇತಿ ಜರುಗಲಿದ್ದು, ಬಾಲಿವುಡ್, ಹಿಪಾಪ್, ಸೆಮಿ ಕ್ಲಾಸಿಕಲ್, ವೆಸ್ಟರ್ನ್, ಪೋಕ್ ಡ್ಯಾನ್ಸ್, ಆ್ಯಕ್ರೋಬ್ಯಾಟಿಕ್ಸ್, ಟೈಗರ್ ಡ್ಯಾನ್ಸ್ ನೃತ್ಯ ತರಬೇತಿಗಳು ಜರುಗಲಿದೆ.
ಇಲ್ಲಿ ಸ್ಕೂಲ್- ಕಾಲೇಜ್ ಕೊರ್ಯೋಗ್ರಫಿ, ಬರ್ತ್ ಡೇ ಇವೆಂಟ್, ಮ್ಯಾರೇಜ್ ಶೋ, ಸಂಗೀತ್, ರಿಯಾಲಿಟಿ ಶೋ ಕೊರ್ಯೋಗ್ರಫಿ, ಸ್ಟೇಜ್ ಶೋ, ಪ್ರೊಡೆಕ್ಟ್ ಲಾಂಚ್ ಶೋ ತರಬೇತಿ ನೀಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.